alex Certify
ಕನ್ನಡ ದುನಿಯಾ       Mobile App
       

Kannada Duniya

ದೀದಿ ಜೊತೆ ಲಂಡನ್ ಗೆ ತೆರಳಿದ್ದ ಪತ್ರಕರ್ತ ಮಾಡಿದ್ದು ಮಾನಗೇಡಿ ಕೃತ್ಯ

ಭಾರತದ ಹಿರಿಯ ಪತ್ರಕರ್ತನೊಬ್ಬ ಲಂಡನ್ ನ ಹೋಟೆಲ್ ನಲ್ಲಿ ಬೆಳ್ಳಿಯ ಚಮಚಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಜೊತೆಗೆ ತೆರಳಿದ್ದ ಪತ್ರಕರ್ತರಲ್ಲಿ ಈತನೂ ಒಬ್ಬ.

ಮಮತಾ ಬ್ಯಾನರ್ಜಿ ಅವರಿಗಾಗಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತ ಕೈಚಳಕ ತೋರಿದ್ದಾನೆ. ಈತ ಖ್ಯಾತ ಬಂಗಾಳಿ ಪತ್ರಿಕೆಯೊಂದರ ವರದಿಗಾರ. ಭೋಜನ ಕೂಟದಲ್ಲಿ ನೀಡಿದ್ದ ಸಿಹಿ ತಿನಿಸುಗಳಲ್ಲಿ ಬೆಳ್ಳಿ ಚಮಚಗಳಿತ್ತು. ಪತ್ರಕರ್ತ ಅದನ್ನು ಜೇಬಿಗಿಳಿಸಿದ್ದಾನೆ.

ಅದನ್ನು ನೋಡಿ ಭಾರತದ ಇತರ ಪತ್ರಕರ್ತರು ಕೂಡ ಬೆಳ್ಳಿ ಚಮಚ ಮತ್ತು ಚಾಕುವನ್ನು ಕದ್ದಿದ್ದಾರಂತೆ. ಸಿಸಿಟಿವಿಯಲ್ಲಿ ಇದನ್ನು ಗಮನಿಸಿದ ಹೋಟೆಲ್ ಭದ್ರತಾ ಸಿಬ್ಬಂದಿ ಬೆಳ್ಳಿ ಚಮಚ ಮತ್ತು ಚಾಕುವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಕೊನೆಗೆ ಪತ್ರಕರ್ತರು ಕದ್ದ ಮಾಲನ್ನು ವಾಪಸ್ ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲ 50 ಪೌಂಡ್ ದಂಡ ಕೂಡ ಕಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...