alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ಬ್ಲಾಂಕೆಟ್ ನಿಂದಾಗಿಯೇ ಕೋಟ್ಯಾಧೀಶನಾಗಿದ್ದಾನೆ ಕಡು ಬಡವ

ಹರಾಜು ಕೋಣೆ ಪ್ರವೇಶಿಸುವ ಮುನ್ನ ಲೊರೆನ್ ಕ್ರಿಡ್ಜರ್ ನಿರುದ್ಯೋಗಿಯಾಗಿದ್ದ, ಕೈಯಲ್ಲಿ ಬಿಡಿಗಾಸಿರಲಿಲ್ಲ. ಆದ್ರೆ ಅಲ್ಲಿಂದ ಹೊರಬರುವಷ್ಟರಲ್ಲಿ ಕೋಟ್ಯಾಧೀಶನಾಗಿಬಿಟ್ಟಿದ್ದ. ಇದೆಲ್ಲಾ ನಡೆದಿದ್ದು ಕೇವಲ 77 ಸೆಕೆಂಡ್ ಗಳಲ್ಲಿ, ಅದು ಕೂಡ ಒಂದು ಬ್ಲಾಂಕೆಟ್ ನಿಂದ.

1800ರ ಸಮಯದ ನವಾಜೋ ಬ್ಲಾಂಕೆಟ್ ಅವನ ಬಳಿಯಿದ್ದ ಏಕೈಕ ಆಸ್ತಿಯಾಗಿತ್ತು. 7 ವರ್ಷಗಳಿಂದ ಲೊರೆನ್ ಅದನ್ನು ಜೋಪಾನ ಮಾಡಿದ್ದ. ಕಾರು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದ ಲೊರೆನ್ ಗೆ ಜೀವನ ನಿರ್ವಹಣೆಯೇ ಕಷ್ಟವಾಗಿಬಿಟ್ಟಿತ್ತು.

ಈ ಬ್ಲಾಂಕೆಟ್ ಮಾರಿದ್ರೆ ಅಲ್ಪ ಹಣ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಹರಾಜು ಕೇಂದ್ರಕ್ಕೆ ಬಂದಿದ್ದ. ಆ ಬ್ಲಾಂಕೆಟ್ ಮೌಲ್ಯದ ಅರಿವೇ ಅವನಿಗೆ ಇರಲಿಲ್ಲ. ಕುಟುಂಬದವರೆಲ್ಲ ಕೆಲಸಕ್ಕೆ ಬಾರದ ಹಳೆಯ ಬ್ಲಾಂಕೆಟ್ ಅಂತಾನೇ ಅಂದುಕೊಂಡಿದ್ರು.

ಆದ್ರೆ ಆ ಬ್ಲಾಂಕೆಟ್ 1.5 ಮಿಲಿಯನ್ ಡಾಲರ್ ಗೆ ಹರಾಜಾಗಿದೆ. ಅಂದ್ರೆ ಸರಿಸುಮಾರು 10 ಕೋಟಿ ರೂಪಾಯಿ. ಕಾರು ಅಪಘಾತದ ಬಳಿಕ ಚಿಕಿತ್ಸೆಗೆ ಹಣವಿಲ್ಲದೇ ಲೊರೆನ್ ಪರದಾಡಿದ್ದ. ಮನೆ ಬಾಡಿಗೆ ಕಟ್ಟಲು ಅವನ ಬಳಿ ಹಣವಿರಲಿಲ್ಲ. ಆದ್ರೀಗ ದಿಢೀರನೆ ಅವನ ಅದೃಷ್ಟ ಖುಲಾಯಿಸಿದೆ. 10 ಕೋಟಿ ರೂಪಾಯಿಗೆ ಒಡೆಯನಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...