alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಗೆ ಹೋಗುವ ಯುವತಿಯರು ಓದಲೇಬೇಕಾದ ಸುದ್ದಿ

ಸೆಲ್ಫಿ ಕ್ರೇಜ್ ಜನರನ್ನು ಇನ್ನೂ ಬಿಟ್ಟಿಲ್ಲ. ಸ್ಪೆಷಲ್ ಸಮಯದಲ್ಲಿ ಸೆಲ್ಪಿ ತೆಗೆದುಕೊಳ್ಳದೇ ಇರುವವರು ಯಾರೂ ಇಲ್ಲವೇನೋ….ಸೆಲ್ಪಿಯಿಂದ ಅನೇಕ ಯಡವಟ್ಟುಗಳಾದರೂ ಕೆಲವೊಮ್ಮೆ ಒಳ್ಳೆಯದೂ ನಡೆಯುತ್ತೆ ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ.

ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ಇಬ್ಬರು ಯುವತಿಯರು ಎಂಜಾಯ್ ಮಾಡುತ್ತಾ ಸೆಲ್ಪಿ ವಿಡಿಯೋ ಮಾಡಿಕೊಳ್ಳುತ್ತಾ ಇದ್ದರು. ಆದರೆ ಅವರು ಸೆಲ್ಪಿಯಲ್ಲಿ ತಲ್ಲೀನರಾಗಿದ್ದಾಗ ಯಾರೋ ಅವರು ಕುಡಿಯುತ್ತಿದ್ದ ಡ್ರಿಂಕ್ಸ್ ನ ಕಪ್ ನೊಳಗೆ ಮಾತ್ರೆಯಂಥ ಪದಾರ್ಥವನ್ನು ಹಾಕಿ ಹೋದದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಅದೃಷ್ಟವಶಾತ್ ಯುವತಿಯರು ಇದನ್ನು ವಿಡಿಯೋದಲ್ಲಿ ಗಮನಿಸಿದ್ದಾರೆ.

ಸೆಲ್ಫಿ ವಿಡಿಯೋ ತೆಗೆದುಕೊಳ್ಳುತ್ತಿದ್ದ ಯುವತಿಯ ಗೆಳತಿ ಜ್ಯೇಡಾ ಸ್ಕೈ ಎಂಬಾಕೆ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಎಲ್ಲಾ ಮಹಿಳೆಯರಿಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾಳೆ. ಆಕೆಯ ಈ ಟ್ವಿಟ್ಟರ್ ಪೋಸ್ಟ್ 97,426 ಬಾರಿ ರೀಟ್ವೀಟ್ ಆಗಿದೆ ಮತ್ತು 10 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...