alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಹುಚ್ಚಿನವರು ಓದಲೇಬೇಕಾದ ಸುದ್ದಿ

selfie

ಸೆಲ್ಫಿ ಹುಚ್ಚು ಹೆಚ್ಚಾಗ್ತಾ ಇದೆ. ಕೆಲವರಿಗೆ ಫೋಟೋಗ್ರಾಫರ್ ತೆಗೆಯುವ ಫೋಟೋಗಿಂತಲೂ ತಾವು ತೆಗೆದ ಸೆಲ್ಫಿ ಇಷ್ಟವಾಗುತ್ತದೆ. ಸದಾ ಸೆಲ್ಫಿಯಲ್ಲಿ ಬ್ಯುಸಿಯಾಗಿರುವವರ ಸ್ವಭಾವದ ಬಗ್ಗೆ ಹೊಸ ಅಧ್ಯಯನವೊಂದು ನಡೆದಿದೆ. ಅದರಲ್ಲಿ ಹೊಸ ವಿಷಯವೊಂದು ಹೊರಬಿದ್ದಿದೆ.

ಸದಾ ಸೆಲ್ಫಿ ತೆಗೆದುಕೊಳ್ಳುವವರು ತಾವು ಹೆಚ್ಚು ಆಕರ್ಷಿತರು ಹಾಗೂ ಇಷ್ಟಪಡಬೇಕಾದ ವ್ಯಕ್ತಿ ಎಂದುಕೊಳ್ಳುತ್ತಾರಂತೆ. ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು 198 ಕಾಲೇಜು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲಿ 100 ವಿದ್ಯಾರ್ಥಿಗಳು ಸೆಲ್ಫಿ ಗೀಳಿನವರು. ಅವರಿಗೆ ಸ್ಮಾರ್ಟ್ ಫೋನ್ ಮೂಲಕ ಸೆಲ್ಫಿ ತೆಗೆಯುವಂತೆ ಹಾಗೂ ಬೇರೆಯವರು ತೆಗೆದ ಫೋಟೋವನ್ನು ತರುವಂತೆ ಹೇಳಲಾಯ್ತು.

ನಂತರ ಪ್ರತಿ ಫೋಟೋಕ್ಕೆ ಅಂಕ ನೀಡುವಂತೆ ಹೇಳಲಾಯ್ತು. ಇತರರಿಗೆ ಹೋಲಿಸಿದರೆ ಸದಾ ಸೆಲ್ಫಿ ತೆಗೆಯುವ ಮಂದಿ ತಮ್ಮ ಸೆಲ್ಫಿಗೆ ಹೆಚ್ಚಿನ ಅಂಕ ಕೊಟ್ಟುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...