alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧ ಹೊಂದಿದ್ದವನಿಗೆ ಕಾದಿತ್ತು ಶಾಕ್

ವಿವಾಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಆತನ ಪತ್ನಿ ಮತ್ತು ಮಕ್ಕಳಿಗೆ ನಗ್ನ ಫೋಟೋಗಳನ್ನು ಕಳಿಸಿದ್ದಾಳೆ. ಲಂಡನ್ ನ ಲೌರಾ ಅರ್ನಾಲ್ಡ್ ಎಂಬ 37 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿರೋ ಫೋಟೋಗಳನ್ನು ಡಿಲೀಟ್ ಮಾಡಲು 10,000 ಡಾಲರ್ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಲೌರಾ ನಾಲ್ಕು ಮಕ್ಕಳ ತಾಯಿ. ಆದ್ರೂ ಪರಪುರುಷನೊಂದಿಗೆ ಸಂಬಂಧ ಹೊಂದಿದ್ಲು. ಒಂದು ವರ್ಷವಾದ್ಮೇಲೆ ಆತ ಇವಳನ್ನು ದೂರ ಮಾಡಿದ್ದ. ಇದರಿಂದ ಕೆರಳಿದ ಲೌರಾ ಆತನ ನಗ್ನ ಫೋಟೋಗಳನ್ನು ಅವನ ಪತ್ನಿ ಮತ್ತು ಮಕ್ಕಳಿಗೆ ಕಳಿಸಿದ್ದಾಳೆ. ಜಾಲತಾಣಗಳಲ್ಲೂ ಅಪ್ಲೋಡ್ ಮಾಡಿದ್ದಾಳೆ.

ತಮ್ಮಿಬ್ಬರ ಮೆಸೇಜ್ ಗಳ ಸ್ಕ್ರೀನ್ ಶಾಟ್ ಅನ್ನು ಕೂಡ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ತನ್ನನ್ನು ತಾನೇ ಸೈಕೋ ಅಂತಾ ಕರೆದುಕೊಂಡಿದ್ದಾಳೆ. ಲೌರಾಳ ಕೃತ್ಯ ಖಂಡಿಸಿ ನೊಂದ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದ. ಕೋರ್ಟ್ ಆಕೆಗೆ 26 ವಾರಗಳ ಜೈಲು ಶಿಕ್ಷೆ ಜೊತೆಗೆ ದಂಡ ಕೂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...