alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಕಿರಿ ಮಾಡಿದ ಪ್ರಯಾಣಿಕನಿಗೆ ‘ಕಿಟಕಿ’ ತಂದಿರಿಸಿದ ಗಗನಸಖಿ…!

ಎಲ್ಲಾ ದಿನಗಳೂ ಒಂದೇ ತರ ಇರೋಲ್ಲಪ್ಪಾ? ಏನ್ ಮಾಡೋಕಾಗುತ್ತೆ? ಕೆಲವೊಮ್ಮೆ ಭಾರತೀಯರ ಹಾಗೆ ಹೊಂದಿಕೊಂಡು ಹೋಗುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು. ಇಲ್ಲಾಂದ್ರೆ ಹೀಗಾಗುತ್ತೆ!

ನಿಮ್ಮ ಸಹ ಪ್ರಯಾಣಿಕನೊಬ್ಬ ಪದೇ ಪದೇ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾ ಇದ್ದರೆ ಎಷ್ಟು ಕಿರಿಕಿರಿಯಾಗುತ್ತದೆ ಎಂದು ನಿಮಗೂ ಗೊತ್ತು. ಅಂತಹ ಒಬ್ಬನಿಗೆ ಗಗನಸಖಿಯೊಬ್ಬಳು ಸರಿಯಾಗಿ ಪಾಠ ಕಲಿಸಿದ ಪ್ರಸಂಗವಿದು.

ವಿಷ್ಯಾ ಏನಪ್ಪಾ ಅಂದ್ರೆ ಜಪಾನ್ ನಲ್ಲಿ ವಿಮಾನ ಪ್ರಯಾಣಿಕನೊಬ್ಬ, “ತಾನು ವಿಂಡೋ ಸೀಟ್ ಅನ್ನು ಸೆಲೆಕ್ಟ್ ಮಾಡಿದ್ದು ಕಿಟಕಿ ಇನ್ನೆಲ್ಲೋ ಇದೆ. ತನಗೆ ಹೊರಗೆ ಏನೂ ಕಾಣಿಸುತ್ತಿಲ್ಲ’’ ಎಂದು ಬೊಬ್ಬಿರಿಯಲು ಪ್ರಾರಂಭಿಸಿದ. ಅಲ್ಲಿ ಎರಡು ಕಿಟಕಿಗಳ ಮಧ್ಯೆ ಆತನ ಸೀಟಿತ್ತು. ಹೀಗಾಗಿ ಆತನಿಗೆ ಮುಂದಿನ ಕಿಟಕಿಯಿಂದಲೂ ಏನೂ ಕಾಣಿಸುತ್ತಿರಲಿಲ್ಲ, ಅದೇ ರೀತಿ ಹಿಂದಿನದ್ದೂ.

ವಿಮಾನದ ಒಳವಿನ್ಯಾಸದಲ್ಲಿ ಏರುಪೇರಾಗಿದ್ದರಿಂದ ಹೀಗಾಗಿತ್ತು. ಆತನ ಕಿರಿಕಿರಿಯನ್ನು ನೋಡುವಷ್ಟು ನೋಡಿದ ವಿಮಾನ ಪರಿಚಾರಕಿ ಕೊನೆಗೆ ಸಹಿಸಲಾಗದೆ, ಕಿಟಕಿ ಮತ್ತು ಹೊರಗೆ ಕಾಣುವ ದೃಶ್ಯದ ಚಿತ್ರ ಬಿಡಿಸಿ ಆತನ ಸೀಟಿನ ಪಕ್ಕ ಅಂಟಿಸಿದ್ದಾಳೆ. ನೋಡುತ್ತಿದ್ದವರೆಲ್ಲಾ ಕಕ್ಕಾಬಿಕ್ಕಿ, ಜೊತೆಗೆ ವಿಮಾನ ತುಂಬೆಲ್ಲಾ ನಗುವಿನ ಅಲೆ. ಅಷ್ಟು ಹೊತ್ತಿಗೆ ವಿಂಡೋರಾಜ ತೆಪ್ಪಗಾಗಿದ್ದಾನೆ. ಈ ತಮಾಷೆ ಪ್ರಸಂಗದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...