alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ದೆವ್ವ ನಿಜವಾಗ್ಲೂ ಇದೆಯೋ ಇಲ್ವೋ ಅನ್ನೋ ಬಗ್ಗೆ ಆಗಾಗ ಚರ್ಚೆ ಆಗ್ತಾನೇ ಇರುತ್ತೆ. ಆದ್ರೆ ಕೆಲವೊಂದು ವಿಚಿತ್ರ ಸನ್ನಿವೇಶಗಳು ದೆವ್ವಗಳು ಇವೆ ಅನ್ನೋದಕ್ಕೆ ಸಾಕ್ಷಿಯಾಗ್ತಿವೆ. ಐರ್ಲೆಂಡ್ ನ ಮಾಧ್ಯಮಿಕ ಶಾಲೆಯಲ್ಲಿರೋ ಸಿಸಿ ಟಿವಿಯಲ್ಲಿ ಸೆರೆಯಾಗಿರೋ ದೃಶ್ಯ ನೋಡಿದ್ರೆ ಎಂಥಾ ಗಂಡೆದೆಯವರು ಕೂಡ ನಡುಗಿ ಹೋಗ್ತಾರೆ.

ನಟ್ಟ ನಡುರಾತ್ರಿ, ಶಾಲೆ ಸಂಪೂರ್ಣ ನಿರ್ಜನವಾಗಿತ್ತು. ಒಂದು ನರಪಿಳ್ಳೆಯೂ ಆ ಶಾಲೆಯಲ್ಲಿರಲಿಲ್ಲ. ಮುಚ್ಚಿದ ಬಾಗಿಲಿನ ಹಿಂದಿನಿಂದ ಭಾರೀ ಶಬ್ಧ ಕೇಳಿಸಿದೆ. ಝಗ್ಗನೆ ಬೆಳಕು ಚೆಲ್ಲಿದೆ. ಲಾಕರ್ ಗಳು ಗಲಗಲನೆ ಅಲುಗಾಡಿವೆ. ಆದ್ರೆ ಇಡೀ ಕಾರಿಡಾರ್ ನಲ್ಲಿ ಯಾರೂ ಇರಲಿಲ್ಲ.

ಲಾಕರ್ ಗಳ ಬಾಗಿಲು ಕೂಡ ತಂತಾನೇ ಓಪನ್ ಆಗಿದೆ. ಅದರೊಳಗಿದ್ದ ಪುಸ್ತಕಗಳೆಲ್ಲ ನೆಲಕ್ಕೆ ಬಿದ್ದಿವೆ. ಅಕ್ಟೋಬರ್ 1 ರಂದು ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಆ ದಿನ ಭಾನುವಾರವಾಗಿದ್ರಿಂದ ಶಾಲೆಗೆ ರಜೆ ಕೂಡ ಇತ್ತು. ಈ ವಿಡಿಯೋ ಯುಟ್ಯೂಬ್ ನಲ್ಲಿ ಕೂಡ ಅಪ್ಲೋಡ್ ಆಗಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...