alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸ್ಟಾರ್ ಮಾಡುವ ಆಸೆ ತೋರಿಸಿ ಈ ಕೆಲಸ ಮಾಡ್ತಿದ್ದ ಪತ್ರಕರ್ತ

ಅಮೆರಿಕಾದ ವಾಷಿಂಗ್ಟನ್ ನಲ್ಲಿ 41 ವರ್ಷದ ಪತ್ರಕರ್ತನೊಬ್ಬನ ಬಣ್ಣ ಬಯಲಾಗಿದೆ. ಪೋರ್ನ್ ಸ್ಟಾರ್ ಮಾಡುವುದಾಗಿ ಹುಡುಗಿಯರನ್ನು ಆಡಿಷನ್ ಗೆ ಕರೆದು ಅತ್ಯಾಚಾರ ನಡೆಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ವಾಷಿಂಗ್ಟನ್ ನ ಸಿಯಾಟಲ್ ಪತ್ರಕರ್ತ ಮ್ಯಾಟ್ ಹಿಕಿ ವಿರುದ್ಧ ಅನೇಕ ಮಹಿಳೆಯರು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಆಡಿಷನ್ ಹೆಸರಲ್ಲಿ ಹುಡುಗಿಯರನ್ನು ತನ್ನ ಅಪಾರ್ಟ್ಮೆಂಟ್ ಗೆ ಕರೆಯುತ್ತಿದ್ದ ಪತ್ರಕರ್ತ ನ್ಯೂಡ್ ಫೋಟೋ ತೆಗೆಯುತ್ತಿದ್ದನಂತೆ. ನಂತ್ರ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ.

ಮೊದಲ ಬಾರಿ 2016ರಲ್ಲಿ ಪತ್ರಕರ್ತನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿತ್ತು. ಪ್ರಕರಣವನ್ನು ಅಶ್ಲೀಲ ಹಗರಣವೆಂದು ಕರೆಯಲಾಗಿತ್ತು. 12 ತಿಂಗಳುಗಳ ಕಾಲ ಪತ್ರಕರ್ತ ಜೈಲಿನಲ್ಲಿ ಕಳೆದಿದ್ದಾನೆ. ಆದ್ರೆ ಮಹಿಳೆಯರ ಒಪ್ಪಿಗೆ ಮೇಲೆ ಈ ಕೆಲಸ ಮಾಡಿದ್ದೇನೆಂದು ಪತ್ರಕರ್ತ ಹೇಳಿದ್ದಾನೆ. ಪೊಲೀಸ್ ಪ್ರಕಾರ 6ಕ್ಕೂ ಹೆಚ್ಚು ಮಹಿಳೆಯರು ಈತನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಬಗ್ಗೆ ಇನ್ನೂ ವಿಚಾರಣೆ ಹಾಗೂ ತನಿಖೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...