alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕು ಹುಡುಕಲು ಹೋದವರಿಗೆ ಸಿಕ್ಕಿದ್ದೇನು ಗೊತ್ತಾ…?

ಕಳೆದು ಹೋಗಿದ್ದ ಮನೆಯಲ್ಲಿನ ಮುದ್ದಿನ ಬೆಕ್ಕನ್ನು ಹುಡುಕಲು ಹೋದ ಕುಟುಂಬಕ್ಕೆ ಬೆಕ್ಕಿನ ಬದಲು ಕಾಣಿಸಿದ್ದು ಏನೆಂದು ತಿಳಿದರೆ ನಿಜಕ್ಕೂ ಅಚ್ಚರಿಯೊಂದಿಗೆ ಗಾಬರಿಯಾಗುವುದರಲ್ಲಿ ಅನುಮಾನವಿಲ್ಲ.

ಅಮೆರಿಕಾದ ಮಿಸ್ಸಿಸ್ಸಿಪಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬ್ರೂಕ್ಯೂ ಸ್ನೋ ಅವರ ಮನೆಯಲ್ಲಿದ್ದ ಬೆಕ್ಕು ಕಾಣೆಯಾಗಿತ್ತು. ಇದನ್ನು ಹುಡುಕುತ್ತ ಮನೆ ಮುಂದಿನ ಮೋರಿಯಲ್ಲಿ ನೋಡಿದಾಗ, ಅವರಿಗೆ ಅಲ್ಲಿ ಬೆಕ್ಕಿನ ಬದಲು ಏಳು ಅಡಿ ಉದ್ದದ ಮೊಸಳೆ ಕಾಣಿಸಿದ್ದು, ತಾಯಿ ಹಾಗೂ ಮಗಳು ಕಕ್ಕಾಬಿಕ್ಕಿಯಾಗಿದ್ದಾರೆ.

ಮೊದಲು ಮೋರಿಯೊಳಗೆ ಇಣುಕಿ ನೋಡಿದಾಗ ಪ್ರಾಣಿಯೊಂದು ಕಾಣಿಸಿದ್ದು, ಎತ್ತಿಕೊಳ್ಳಲು ಹೋಗಿದ್ದಾರೆ. ಆದರೆ ಬಳಿಕ ಮೊಸಳೆ ಎಂದು ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬೃಹತ್ ಮೊಸಳೆಯನ್ನು ನೋಡಿ, ಮಿಸ್ಸಿಸ್ಸಿಪಿ ವನ್ಯಜೀವಿ ಸಂರಕ್ಷಣ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ತಜ್ಞ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮೋರಿಯಿಂದ ಮೊಸಳೆಯನ್ನು ಹೊರ ತೆಗೆದಾಗಲೇ ಇದು ಏಳು ಅಡಿ ಉದ್ದವಿದೆ ಎಂಬುದು ಗೊತ್ತಾಗಿದೆ. ಮೊಸಳೆಯನ್ನು ಮೋರಿಯಿಂದ ಹೊರತಗೆಯುವುದನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಇದೀಗ ವೈರಲ್ ಆಗಿದ್ದು, ಸುಮಾರು 77ಸಾವಿರ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.

This is across the street from a friend’s house in Pascagoula. A neighbor and her daughter were out looking for their cat, and this 7 foot alligator poked his head out of the storm drain. 😳 #gatorseverywhere #stayawayfromdrains #coastlife

Posted by Michelle M. Smith on Tuesday, January 8, 2019

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...