alex Certify
ಕನ್ನಡ ದುನಿಯಾ       Mobile App
       

Kannada Duniya

ಹುಣ್ಣಿಮೆ ರಾತ್ರಿ ಸಮುದ್ರಕ್ಕೆ ಸ್ನಾನ ಮಾಡಲು ಹೋದ ಮಹಿಳೆ…

cindywaldrone-

ಹುಣ್ಣಿಮೆ ರಾತ್ರಿ ಸಮುದ್ರದಲ್ಲಿ ಸ್ನಾನ ಮಾಡಲು ಮುಂದಾದ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೋದ ಇಬ್ಬರಲ್ಲಿ ಒಬ್ಬಳು ಜಗತ್ತನ್ನೇ ಬಿಟ್ಟು ಹೋದ್ರೆ ಮತ್ತೊಬ್ಬ ಶಾಕ್ ಗೆ ಹಾಸಿಗೆ ಹಿಡಿದಿದ್ದಾನೆ.

46 ವರ್ಷದ ಸಿಂಡಿ ವಲ್ಡ್ರಾನ್ ಮತ್ತು ಆಕೆಯ ಸ್ನೇಹಿತ ರಾತ್ರಿ ಸಮುದ್ರಕ್ಕೆ ಹೋಗಿ ಸ್ನಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಮುದ್ರದಲ್ಲಿದ್ದ ಮೊಸಳೆ ಸಿಂಡಿಯನ್ನು ಹೊತ್ತೊಯ್ದಿದೆ.

ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಇಲ್ಲಿನ ಬೀಚ್ ಒಂದರ ಮುಂದೆ ಅಪಾಯದ ಫಲಕವನ್ನು ಹಾಕಲಾಗಿತ್ತು. ಅದ್ರಲ್ಲಿ ಅಪಾಯದ ಮೊಸಳೆ ಇದೆ ಎಂದು ಬರೆಯಲಾಗಿತ್ತು. ಇದನ್ನು ನೋಡಿಯೂ ಸಿಂಡಿ ಹಾಗೂ ಸ್ನೇಹಿತ ಸಮುದ್ರಕ್ಕಿಳಿದಿದ್ದರು. ಆ ವೇಳೆ ಮೊಸಳೆ ಸಿಂಡಿ ಮೇಲೆ ದಾಳಿ ನಡೆಸಿದೆ. ಸಿಂಡಿ ಕಾಲಿಗೆ ಬಾಯಿ ಹಾಕಿದೆ. ಇದನ್ನು ನೋಡಿದ ಸ್ನೇಹಿತ ಹೊರ ಬಂದು ರಕ್ಷಣೆಗೆ ಕೂಗಿದ್ದಾನೆ.

ತಕ್ಷಣ ಬಂದ ರಕ್ಷಣಾ ಪಡೆ ಸಿಂಡಿ ಹುಡುಕಾಟ ನಡೆಸಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ನೋಡಿರುವ ಸ್ನೇಹಿತ ಶಾಕ್ ನಲ್ಲಿ ಆಸ್ಪತ್ರೆಯಲ್ಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...