alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿದ್ದುಕೊಂಡೇ ಮಾಡಿದ್ದಾನೆ ಖತರ್ನಾಕ್ ಕೆಲಸ

jail

ಜೊರ್ಡನ್ ಮ್ಯಾಕ್ ಕ್ರೀಡಿ ಸದ್ಯ ಸ್ಕಾಟ್ಲಾಂಡ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದಾನೆ. ಕೊಲೆ ಕೇಸೊಂದರಲ್ಲಿ ಜೈಲು ಸೇರಿರುವ ಜೊರ್ಡನ್ , ಅಲ್ಲೇ ಯಾರದ್ದೋ ಫೋನ್ ಕದ್ದು ಫೇಸ್ಬುಕ್ ಮೂಲಕ ವ್ಯಕ್ತಿಯೊಬ್ಬರಿಗೆ ಮೆಸೇಜ್ ಕಳಿಸಿದ್ದಾನೆ.

ಅವರ 1 ವರ್ಷದ ಮಗುವನ್ನು ಕೊಲ್ಲೋದಾಗಿ ಬೆದರಿಕೆ ಹಾಕಿದ್ದಾನೆ. 23 ವರ್ಷದ ಜೊರ್ಡನ್ 2011ರಲ್ಲಿ 13 ವರ್ಷದ ಬಾಲಕ ಜಾಸ್ ವಿಲ್ಸಲ್ ಎಂಬಾತನನ್ನು ಥಳಿಸಿ ಕೊಂದಿದ್ದ. ಈಗ ಜೈಲಿನಲ್ಲಿ ಮೊಬೈಲ್ ಒಂದನ್ನು ಕದ್ದಿದ್ದ ಜೊರ್ಡನ್, ಅಕೌಂಟ್ ಒಂದನ್ನು ಕ್ರಿಯೇಟ್ ಮಾಡಿದ್ದ.

ನಂತರ ತಮ್ಮಿ ಎಂಬ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆಕೆ ಆಕಸ್ಮಿಕವಾಗಿ ಅದನ್ನು ಅಕ್ಸೆಪ್ಟ್ ಮಾಡಿಬಿಟ್ಟಿದ್ಲು. ಇವನ ಕಿರಾತಕ ಬುದ್ದಿ ಗೊತ್ತಾಗಿ ಆಕೆ ಬೈಯ್ದ ತಕ್ಷಣ, ಅವಳ ಮೇಲೆ ಅತ್ಯಾಚಾರ ಮಾಡೋದಾಗಿ ಬೆದರಿಸಿದ್ದ. ನಂತರ ಆಕೆಯ 1 ವರ್ಷದ ಪುಟ್ಟ ಮಗುವನ್ನೂ ಕೊಲ್ಲೋದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...