alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪ್ ಕೇಸ್ ವಿಚಾರಣೆ ನಡೆಸ್ತಿದ್ದ ಅಧಿಕಾರಿ ಪತಿ ಜೊತೆ ಸಂಬಂಧ ಬೆಳೆಸಲು ಹೆದರಿದ್ಲು

ಇದೊಂದು ಮಹಿಳಾ ಅಧಿಕಾರಿಯ ಕಥೆ. ವಿಲಕ್ಷಣವೆನಿಸಿದ್ರೂ ಭಯ ಹುಟ್ಟಿಸುವ ಕಥೆ. ಸ್ಕಾಟ್ಲ್ಯಾಂಡ್ ಯಾರ್ಡ್ ನ ಒಬ್ಬ ಮಹಿಳಾ ಅಧಿಕಾರಿ ರೇಪ್ ಕೇಸ್ ವಿಚಾರಣೆ ಮಾಡ್ತಾ ಮಾಡ್ತಾ ಮಾನಸಿಕ ಖಾಯಿಲೆಗೆ ತುತ್ತಾಗಿದ್ದಾಳೆ.

ಡಿಸೆಂಬರ್ 2014 ರಲ್ಲಿ ಮಹಿಳೆ ಕೇಸ್ ಒಂದರ ವಿಚಾರಣೆ ಶುರು ಮಾಡಿದ್ಲು. ಮೂರು ಅಪ್ರಾಪ್ತ ಮಕ್ಕಳನ್ನು ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ. ಆತನ ಮನೆ ಮೇಲೆ ದಾಳಿ ನಡೆಸಿದ್ದ ಮಹಿಳಾ ಅಧಿಕಾರಿ 100ಕ್ಕೂ ಹೆಚ್ಚು ಸಿಡಿಗಳನ್ನು ವಶಕ್ಕೆ ಪಡೆದಿದ್ದಳು. ಪೀಡಿತ ಮಕ್ಕಳ ಜೊತೆ ಆಗಾಗ ಮಾತನಾಡ್ತಿದ್ದ ಮಹಿಳೆ ಅವ್ರ ಜೊತೆ ಭಾವನಾತ್ಮಕವಾಗಿ ಬೆರೆತಿದ್ದಳು.

ವಿಚಾರಣೆ ಶುರುವಾಗಿ ಮೂರು ತಿಂಗಳಾಗಿತ್ತು. ಆಗ್ಲೆ ಆಕೆ ವಿಚಿತ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದಳು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಹೇಳಿದ್ರೆ ಅವ್ರು ಇದನ್ನು ನಿರ್ಲಕ್ಷ್ಯ ಮಾಡಿದ್ದರು. ವಿಚಾರಣೆ ಕಾರಣಕ್ಕೆ ಮಹಿಳೆ ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ವಿಡಿಯೋವನ್ನು 100ಕ್ಕೂ ಹೆಚ್ಚು ಬಾರಿ ನೋಡಿದ್ದಳು. ಒಂದೊಂದು ವಿಡಿಯೋವನ್ನು ಸತತ 8 ಗಂಟೆಗಳ ಕಾಲ ನೋಡಿದ್ದೂ ಇದೆ.

ಇದು ಆಕೆ ಮನಸ್ಸನ್ನು ಸಂಪೂರ್ಣ ಆವರಿಸಿತ್ತು. ಆರಂಭದಲ್ಲಿ ಕೆಟ್ಟ ಕನಸು ಕಾಣ್ತಿದ್ದ ಮಹಿಳೆ ನಂತ್ರ ರಾತ್ರಿ ಸಂಪೂರ್ಣ ನಿದ್ರೆ ಕಳೆದುಕೊಂಡಿದ್ದಳು. ಪತಿ ಜೊತೆ ಸಂಬಂಧ ಬೆಳೆಸಲು ಆಕೆಗೆ ಸಾಧ್ಯವಾಗ್ತಿರಲಿಲ್ಲ. ಸಂಬಂಧ ಬೆಳೆಸುವ ವೇಳೆ ಅಸಹಜವಾಗಿರುತ್ತಿದ್ದ ಮಹಿಳೆ ಭಯಗೊಂಡು ಅಳುತ್ತಿದ್ದಳಂತೆ. ಚಿಕಿತ್ಸೆ ನಂತ್ರ ಆಕೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...