alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿ ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ತಮಗೆ ಬಂದ ಕರೆಯನ್ನನುಸರಿಸಿ ಹುಲಿ ಹಿಡಿಯಲೆಂದು ಹೋದ ಸ್ಕಾಟ್ಲ್ಯಾಂಡ್ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಪೊಲೀಸರಿಗೆ ಬಂದ ಕರೆ ಹುಸಿಯಲ್ಲವಾದರೂ ಹುಲಿಯನ್ನು ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಮಾತ್ರ ನಗು ತರಿಸುವಂತಿದೆ.

ಸ್ಕಾಟ್ಲ್ಯಾಂಡ್ ನ ಪೀಟರ್ ಹೆಡ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ರೈತ ಬ್ರೂಸ್ ಗ್ರುಬ್ ಎಂಬಾತ ಪೊಲೀಸರಿಗೆ ಕರೆ ಮಾಡಿ ತನ್ನ ಫಾರ್ಮ್ ನಲ್ಲಿ ಹುಲಿ ಇರುವುದಾಗಿ ಹೇಳಿದ್ದ. ತಡ ಮಾಡದೆ ಸ್ಥಳಕ್ಕೆ ತೆರಳಿದ ಪೊಲೀಸರು, ಅದಕ್ಕೂ ಮುನ್ನ ವೈಲ್ಡ್ ಲೈಫ್ ಪಾರ್ಕ್ ಸಿಬ್ಬಂದಿಗೆ ಕರೆ ಮಾಡಿ ಹುಲಿಯೇನಾದರೂ ತಪ್ಪಿಸಿಕೊಂಡಿದೆಯೇ ಎಂದು ಪರಿಶೀಲಿಸಲು ಹೇಳಿದ್ದಾರೆ.

ಸ್ಥಳಕ್ಕೆ ತೆರಳಿದ ಪೊಲೀಸರು ಸುಮಾರು 45 ನಿಮಿಷ ಹುಲಿಗಾಗಿ ಹುಡುಕಾಡಿದ್ದು, ನಂತರ ಅದು ಪತ್ತೆಯಾಗಿದೆ. ಆದರೆ ಸನಿಹಕ್ಕೆ ಹೋದ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಹುಲಿಯಂತೆಯೇ ಇದ್ದ ಬೊಂಬೆ ಅವರಿಗೆ ಕಂಡು ಬಂದಿದೆ. ಥೇಟ್ ಹುಲಿಯಂತೆ ಇದ್ದ ಈ ಬೊಂಬೆಯನ್ನು ಯಾರೋ ಅಲ್ಲಿ ಹಾಕಿದ್ದು, ಇದನ್ನು ನೋಡಿದ ರೈತ, ಹುಲಿಯೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ್ದನೆನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇಲಾಖೆ ವಕ್ತಾರರು, ರೈತ ಬೇಕೆಂದೇ ಈ ಕರೆ ಮಾಡಿಲ್ಲ. ಆತ ಹುಲಿಯೆಂದು ಭಾವಿಸಿ ಕರೆ ಮಾಡಿದ್ದು, ನಮಗೆ ನಾಗರಿಕರ ರಕ್ಷಣೆಯ ಮುಖ್ಯವಾದ ಕಾರಣ ಕರೆಯನ್ನು ನಿರ್ಲಕ್ಷಿಸದೆ ತಡ ಮಾಡದೆ ಸ್ಥಳಕ್ಕೆ ತೆರಳಿದ್ದೆವು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...