alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ಸಿಒನಲ್ಲಿ ಯೋಗಕ್ಕೆ ಮೊದಲ ಬಾರಿ ಸಿಕ್ತು ಜಾಗ

ಶಾಂಘೈ ಕಾರ್ಪೊರೇಶನ್ ಆರ್ಗನೈಸೇಶನ್ (SCO) ನಲ್ಲಿ ಮೊದಲ ಬಾರಿಗೆ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮೂಲಕ ಚೀನಾದಲ್ಲಿ ಅಂತರಾಷ್ಟ್ರೀಯ ಯೋಗ ದಿವಸ ಶುರುವಾಗಿದೆ. ವಿಶ್ವಸಂಸ್ಥೆ 2014 ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿವಸದ ಘೋಷಣೆ ಮಾಡಿದೆ.

ಚೀನಾದಲ್ಲಿ ಜನರು ಯೋಗವನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಪ್ರತಿ ವರ್ಷ ಚೀನಾದಲ್ಲಿ ಯೋಗ ದಿನವನ್ನು ಆಯೋಜಿಸಲಾಗುತ್ತದೆ. ಎಸ್ಸಿಒನಲ್ಲಿ ಇದೇ ಮೊದಲ ಬಾರಿ ಯೋಗ ದಿನ ಆಚರಿಸಲಾಯ್ತು. ಎಸ್ಸಿಒ ಮುಖ್ಯ ಕಾರ್ಯದರ್ಶಿ ರಶೀದ್ ಅಲಿಮೊವ್, ಚೀನಾದಲ್ಲಿರುವ ಭಾರತದ ರಾಯಭಾರಿ ಗೌತಮ್ ಬಂಬ್ವಾಲೆ, ಪತ್ನಿ ಅಮಿತಾ ಹಾಗೂ ಬೇರೆ ಬೇರೆ ದೇಶಗಳ ರಾಯಭಾರಿಗಳು ಯೋಗ ದಿವಸದಲ್ಲಿ ಪಾಲ್ಗೊಂಡಿದ್ದರು.

ಚೀನಾ, ರಷ್ಯಾ, ಪಾಕಿಸ್ತಾನ, ಕಝಕಿಸ್ತಾನ, ಕರ್ಗಿಸ್ತಾನ, ತಜಕಿಸ್ತಾನ ಮತ್ತು ಉಜ್ಜೇಕಿಸ್ತಾನದ ಸದಸ್ಯರು ಎಸ್ಸಿಒನಲ್ಲಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ಸದಸ್ಯರು ಹಿಂದಿನ ವರ್ಷ ಎಸ್ಸಿಒನಲ್ಲಿ ಸೇರ್ಪಡೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...