alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ತಯಾರಿಸಲು ಮಕ್ಕಳ ಓವರ್ ಟೈಮ್ ಕೆಲಸ?

ಸ್ಮಾರ್ಟ್ ಫೋನ್ ಗಳ ತಯಾರಿಕೆ ಅತ್ಯಾಧುನಿಕ ಕೆಲಸವೆಂದೇ ನಾವೆಲ್ಲಾ ಭಾವಿಸಿದ್ದೇವೆ. ಆದ್ರೆ ಇದೆಲ್ಲವೂ ಮಕ್ಕಳಾಟಾನಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ಯಾಕಂದ್ರೆ ಚೀನಾದಲ್ಲಿ ಮಕ್ಕಳೇ ಐಫೋನ್ ಬಿಡಿ ಭಾಗಗಳನ್ನು ತಯಾರಿಸಿದ್ದಾರೆ.

ಚೀನಾದ ಫ್ಯಾಕ್ಟರಿಯೊಂದರಲ್ಲಿ ಐಫೋನ್ ಎಕ್ಸ್ ಬಿಡಿಭಾಗಗಳನ್ನು ಮಕ್ಕಳೇ ತಯಾರಿಸಿದ್ದಾರೆ. ಅಷ್ಟೇ ಅಲ್ಲ ಅಕ್ರಮವಾಗಿ ಅವರಿಂದ ಓವರ್ ಟೈಮ್ ಕೆಲಸ ಕೂಡ ಮಾಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆ್ಯಪಲ್ ಕಂಪನಿ ಸ್ಪಷ್ಟನೆ ನೀಡಿದ್ದು, ಮಕ್ಕಳು ಸ್ವಯಂಪ್ರೇರಿತರಾಗಿ ಕೆಲಸ ಮಾಡಿದ್ದಾರೆ ಅಂತಾ ಹೇಳಿದೆ.

ಮಕ್ಕಳಿಗೆ ವೇತನವನ್ನೂ ನೀಡಿರುವುದಾಗಿ ಸ್ಪಷ್ಟಪಡಿಸಿದೆ. ಆದ್ರೆ ಓವರ್ ಟೈಮ್ ಕೆಲಸ ಮಾಡಿಸಿಕೊಂಡಿರೋದು ಮಾತ್ರ ಅಕ್ಷಮ್ಯ ಅಂತಾ ಅಭಿಪ್ರಾಯಪಟ್ಟಿದೆ. ಇನ್ನೊಂದು ವರದಿಯ ಪ್ರಕಾರ ಅಭ್ಯಾಸದ ಒಂದು ಭಾಗವಾಗಿ ವಿದ್ಯಾರ್ಥಿಗಳು ಫಾಕ್ಸ್ ಕಾನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ.

ಅಭ್ಯಾಸಕ್ಕೂ ಇಲ್ಲಿ ಮಾಡಿರುವ ಕೆಲಸಕ್ಕೂ ಸಂಬಂಧವೇ ಇಲ್ಲ ಅಂತಾ ಕೆಲ ವಿದ್ಯಾರ್ಥಿಗಳು ಹೇಳ್ತಿದ್ದಾರೆ. ಕ್ಸೆಂಗ್ಝೌನ ಅರ್ಬನ್ ರೇಲ್ ಟ್ರಾನ್ಸಿಟ್ ಸ್ಕೂಲ್ ವಿದ್ಯಾರ್ಥಿಗಳು ಈ ಫ್ಯಾಕ್ಟರಿಯಲ್ಲಿ ದಿನಕ್ಕೆ 11 ಗಂಟೆ ಕೆಲಸ ಮಾಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...