alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಈ ಶಾಲಾ ಸಮವಸ್ತ್ರದ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!!

ಶಾಲಾ ವಿದ್ಯಾರ್ಥಿಗಳಲ್ಲಿ ತಾರತಮ್ಯ ಭಾವನೆ ಬರಬಾರದೆಂಬ ಕಾರಣಕ್ಕೆ ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಆದರೆ ಜಪಾನಿನ ಶಾಲೆಯೊಂದು ತೆಗೆದುಕೊಂಡಿರುವ ತೀರ್ಮಾನ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಟೋಕಿಯೋದ ಪಬ್ಲಿಕ್ ಎಲಿಮೆಂಟರಿ ಸ್ಕೂಲ್ ಆಡಳಿತ ಮಂಡಳಿ ಇಂತಹ ಒಂದು ನಿರ್ಧಾರ ಕೈಗೊಂಡಿದ್ದು, ಮಕ್ಕಳಿಗೆ ದುಬಾರಿ ಬೆಲೆಯ ಬ್ರಾಂಡೆಡ್ ಬಟ್ಟೆಯನ್ನು ಸಮವಸ್ತ್ರವನ್ನಾಗಿ ನಿಗದಿಪಡಿಸಲಾಗಿದೆ.

ಇದರ ಬೆಲೆ ಸುಮಾರು 80.000 ಯೆನ್ (ಅಂದಾಜು 47,000 ರೂ ) ಇದ್ದು, ಇಷ್ಟೊಂದು ಬೆಲೆ ಬಾಳುವ ಸಮವಸ್ತ್ರವನ್ನು ನಿಗದಿಪಡಿಸಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರ ಈಗ ಸಂಸತ್ ಮೆಟ್ಟಿಲನ್ನೂ ಏರಿದ್ದು, ಶಾಲಾ ಪ್ರಾಂಶುಪಾಲರು ಮಾತ್ರ ಇದ್ಯಾವುದಕ್ಕೂ ಜಗ್ಗದೆ ಏಪ್ರಿಲ್ ನಿಂದ ಈಗ ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯವೆಂದು ಹೇಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...