alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನ ಟಾಪ್ ಮೇಲೆ ಹೋಮ್ ವರ್ಕ್ ಮಾಡಿದ್ಲು ಹುಡುಗಿ

ಚೀನಾದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಶಿಕ್ಷಕರು ಕೊಟ್ಟ ಹೋಮ್ ವರ್ಕ್ ಮಾಡದ ವಿದ್ಯಾರ್ಥಿನಿಯೊಬ್ಬಳು, ಕಾರಿನಲ್ಲಿ ಶಾಲೆಗೆ ಹೋಗುವಾಗಲೇ ತಂದೆಗೆ ಗೊತ್ತಾಗದಂತೆ ಟಾಪ್ ಮೇಲೆ ಹೋಮ್ ವರ್ಕ್ ಮಾಡಿದ್ದಾಳೆ

ಕಳೆದ ವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿರುವ ವಿದ್ಯಾರ್ಥಿನಿಯ ತಂದೆ, ಮಗಳನ್ನು ಶಾಲೆಗೆ ಕರೆದುಕೊಂಡು ಶಾಲೆಗೆ ಹೊರಟಿದ್ದ. ಆಕೆಯ ತಂದೆ ಕಾರು ಚಾಲನೆ ಮಾಡುತ್ತಿದ್ದರೆ ಆತನ ಪಕ್ಕದಲ್ಲಿ ಸ್ನೇಹಿತ ಕುಳಿತಿದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ತಾನು ಹೋಂ ವರ್ಕ್ ಮಾಡಿಲ್ಲವೆಂಬ ಸಂಗತಿ ಅರಿವಿಗೆ ಬಂದಿದೆ.

ಕಾರಿನಲ್ಲಿ ಹೋಮ್ ವರ್ಕ್ ಮಾಡಿದರೆ ತಂದೆ ಬಯ್ಯಬಹುದೆಂಬ ಕಾರಣಕ್ಕೆ ಆತ ಸ್ನೇಹಿತನೊಂದಿಗೆ ಮಾತಿನಲ್ಲಿ ಮಗ್ನನಾಗಿರುವಾಗ ಮೆಲ್ಲಗೆ ಕಿಟಕಿಯಿಂದ ತಲೆಯನ್ನು ಹೊರಚಾಚಿ ಟಾಪ್ ಮೇಲೆ ಹೋಮ್ ವರ್ಕ್ ಮಾಡಲಾರಂಭಿಸಿದ್ದಾಳೆ. ಕಿಟಕಿಯಿಂದ ಅರ್ಧ ದೇಹ ಹೊರ ಹಾಕಿ ಅಪಾಯಕಾರಿ ರೀತಿಯಲ್ಲಿ ಕುಳಿತಿದ್ದ ಹುಡುಗಿಯನ್ನು ಕಂಡ ದಾರಿಹೋಕರು ಆತಂಕಕ್ಕೊಳಗಾಗಿದ್ದಾರೆ. ಅಷ್ಟರಲ್ಲಿ ಈ ವಿಚಾರ ವಿದ್ಯಾರ್ಥಿನಿಯ ತಂದೆ ಗಮನಕ್ಕೂ ಬಂದಿದ್ದು, ಆತ ಕಾರು ನಿಲ್ಲಿಸಿ ಮಗಳನ್ನು ಒಳಗೆ ಕೂರಿಸಿಕೊಂಡಿದ್ದಾನೆ. ಹೋಂ ವರ್ಕ್ ಮಾಡಲು ಈ ವಿದ್ಯಾರ್ಥಿನಿ ತೆಗೆದುಕೊಂಡಿರುವ ರಿಸ್ಕ್ ನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...