alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದಲ್ಲಿ ತಾತ್ಕಾಲಿಕ ಆಶ್ರಯ

ಕಾಕ್ಸ್ ಬಜಾರ್(ಬಾಂಗ್ಲಾದೇಶ): ಮಯನ್ಮಾರ್ ನಲ್ಲಿ ನಲುಗಿರುವ ರೋಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶದಲ್ಲಿ ತಾತ್ಕಾಲಿಕ ಆಶ್ರಯ ಪಡೆದುಕೊಂಡಿದ್ದಾರೆ.

ಮಯನ್ಮಾರ್ –ಬಾಂಗ್ಲಾದೇಶ ಗಡಿಯಲ್ಲಿ ಕಟ್ಬಾಲಂಗ್ –ಟೆಕ್ನಾಫ್ ಗೆ ಸಂಪರ್ಕಿಸುವ ಅರ್ಕಾಮ್ ರಸ್ತೆಯಲ್ಲಿ ರೋಹಿಂಗ್ಯಾ ನಿರಾಶ್ರಿತರು ತಾತ್ಕಾಲಿಕ ಕ್ಯಾಂಪ್ ಗಳಲ್ಲಿದ್ದಾರೆ.

ಬಂಧು, ಬಳಗವನ್ನು ಕಳೆದುಕೊಂಡವರು, ನೋವು ಅನುಭವಿಸುತ್ತಿರುವವರು ಕ್ಯಾಂಪ್ ನಲ್ಲಿದ್ದು, ಮಯನ್ಮಾರ್ ನಲ್ಲಿ ನಡೆದ ಭಯಾನಕ ಕತೆಗಳನ್ನು ಬಿಚ್ಚಿಟ್ಟಿದ್ದು, ಕೆಲವರ ಜೀವನದಲ್ಲಿ ನಡೆದಿರುವ ಘಟನೆಗಳಂತೂ ದಿಗಿಲು ಹುಟ್ಟಿಸುವಂತಿವೆ.

ಕ್ಯಾಂಪ್ ನಲ್ಲಿರುವ ಬೇಗಂ ಎಂಬಾಕೆಯ ಪತಿಯನ್ನು ಹತ್ಯೆ ಮಾಡಲಾಗಿದ್ದು, ಬೇಗಂ ಮಕ್ಕಳನ್ನು ಕರೆದುಕೊಂಡು ಮಯನ್ಮಾರ್ ಬಿಟ್ಟು ಬಂದಿದ್ದಾರೆ. 9 ತಿಂಗಳ ಮಗುವನ್ನು ಕೈಯಲ್ಲಿಟ್ಟುಕೊಂಡಿದ್ದ ಅಂವಾರಾ ಬೇಗಂ(30) ಅವರ ತಂದೆಯನ್ನು ಕೊಲೆ ಮಾಡಲಾಗಿದೆ. ಇನ್ನು ಮೊಹಮ್ಮದ್ ಕಾಸೀಂ(40) ಅವರ ಕತೆ ಎಂತಹವರ ಮನವನ್ನು ಕಲಕುತ್ತದೆ. ಅವರ ಪುತ್ರಿಯ ಮೇಲೆ ದಾಳಿಕೋರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಣ್ಣೆದುರೆ ಘಟನೆ ನಡೆದರೂ, ಕಾಸೀಂ ಅಸಹಾಯಕರಾಗಿದ್ದರು. ಅವರ ಪತ್ನಿ, ಮಕ್ಕಳು ಎಲ್ಲಿದ್ದಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಕಾಸೀ ಒಬ್ಬರೇ ಕ್ಯಾಂಪ್ ನಲ್ಲಿದ್ದಾರೆ.

ಹೀಗೆ ವಿವಿಧ ಕಾರಣಗಳಿಂದ ಆಘಾತಕ್ಕೆ ಒಳಗಾದವರೇ ಕ್ಯಾಂಪ್ ಗಳಲ್ಲಿದ್ದು, ನಲುಗಿರುವ ಅವರಲ್ಲಿ ಯಾವುದೇ ಭರವಸೆ ಉಳಿದಿಲ್ಲ. ಕ್ಯಾಂಪ್ ಸಂಪರ್ಕಿಸುವ ರಸ್ತೆಗಳಲ್ಲಿ ಪ್ರಧಾನಿ ಶೇಖ್ ಹಸೀನಾ, ಅವರ ತಂದೆ ಶೇಖ್ ಮುಜಿಬುರ್ ಅವರ ಚಿತ್ರಗಳಿರುವ ದೊಡ್ಡ ಬ್ಯಾನರ್ ಗಳಲ್ಲಿ ‘ನಾವು ಮಾನವೀಯತೆಯೊಂದಿಗೆ ಇದ್ದೇವೆ’ ಎಂದು ಬರೆಯಲಾಗಿದೆ.

ಮಯನ್ಮಾರ್ ನಲ್ಲಿ ಆಗಸ್ಟ್ 25 ರಂದು ರೋಹಿಂಗ್ಯಾಗಳು ದಾಳಿ ನಡೆಸಿದ ಬಳಿಕ, ಮಯನ್ಮಾರ್ ಮಿಲಿಟರಿ ರೋಹಿಂಗ್ಯಾಗಳನ್ನು ಗುರಿಯಾಗಿಸಿಕೊಂಡು ಪ್ರತಿ ದಾಳಿ ನಡೆಸಿದೆ. ಇದರಿಂದಾಗಿ ಲಕ್ಷಾಂತರ ಮಂದಿ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪ್ರವೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...