alex Certify
ಕನ್ನಡ ದುನಿಯಾ       Mobile App
       

Kannada Duniya

99 ವರ್ಷದ ಜೈಲು ಶಿಕ್ಷೆ ತಪ್ಪಿಸಿದೆ ಯುವಕನ ಆ ಸೆಲ್ಫಿ…!

ಇತ್ತೀಚಿನ ದಿನದಲ್ಲಿ ಸೆಲ್ಫಿ ಕ್ರೇಜ್‌ನಿಂದ ಅನೇಕ‌ ಎಡವಟ್ಟಾಗುತ್ತಿದೆ ಎನ್ನುವ ಮಾತುಗಳು ಸಾಮಾನ್ಯ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ಹಾಗೇ, ಯುವಕ ತೆಗೆದುಕೊಂಡ ಸೆಲ್ಫಿಯಿಂದ, ಆತನಿಗಾಗಿದ್ದ ಜೈಲು ಶಿಕ್ಷೆಯಿಂದ ಪಾರಾಗಿದ್ದಾನೆ.

ಹೌದು, ಅಚ್ಚರಿ ಎನಿಸಿದರು ಇದು ಸತ್ಯ. ಟೆಕ್ಸಾಸ್‌ ನ 21 ವರ್ಷದ ಕ್ರಿಸ್ಟೋಫರ್ ಪ್ರಿಕೋಪಿಯಾ ಎನ್ನುವ ಯುವಕ ತನ್ನ ಮಾಜಿ ಗರ್ಲ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 99 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಯುವಕ ಹೇಳಿದರೂ, ಅದನ್ನು ನ್ಯಾಯಾಲಯ‌ ಒಪ್ಪದೇ, ಶಿಕ್ಷೆ ವಿಧಿಸಿತ್ತು.

ಯುವತಿ‌ ತನ್ನ ಮಾಜಿ ಪ್ರೇಯಸಿ ಕ್ರಿಸ್ಟೋಫರ್ ಸೆ.21 ಸಂಜೆ 7.30ಕ್ಕೆ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಿದ್ದಳು. ಆದರೆ ಇದೊಂದು ಸುಳ್ಳು ಆರೋಪ ಎಂದು ಸಾಬೀತು ಮಾಡಲು‌ ಯುವಕನ‌ ಬಳಿ‌ ಯಾವುದೇ ಸಾಕ್ಷ್ಯ ಇಲ್ಲದೇ ಇದ್ದಾಗ,‌ ಆತನ‌ ತಾಯಿಗೆ ಅದೇ ದಿನ ಆತ ತೆಗೆದ ಸೆಲ್ಫಿ ನೆನಪಾಗಿ, ಅದನ್ನು ಸಾಕ್ಷ್ಯವಾಗಿ ನೀಡಿದ್ದಾಳೆ. ಪೊಲೀಸರು ಫೋಟೋದ ಮೆಗಾಡೆಟಾ ಪರಿಶೀಲಿಸಿದಾಗ ನಿಜಾಂಶ ಬಯಲಾಗಿದೆ.

ತನಿಖೆ ವೇಳೆ, ಯುವತಿ ಹೇಳಿದ ಸಮಯದಲ್ಲಿ ಯುವಕ ತನ್ನ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ಆಕೆಯ ಸ್ಥಳದಿಂದ ಸುಮಾರು 65 ಮೈಲಿ‌ ದೂರದಲ್ಲಿದ್ದ ಎಂದು‌ ಬಹಿರಂಗವಾಗಿದ್ದು, ಇದೀಗ ಯುವಕನನ್ನು ನಿರಪರಾಧಿ ಎಂದು ತೀರ್ಮಾನಿಸಲಾಗಿದೆ. ಆದರೆ ಯುವತಿಯ ವಿರುದ್ಧ ಕೇಸ್ ಹಾಕುವುದಾಗಿ ಯುವಕನ‌ ಕುಟುಂಬ ಸದಸ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...