alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆ ವೇಳೆ ಡೇಟಾ ಉಳಿಸುವುದೇಗೆ…?

teen-girl-using-whatsapp

ಅಯ್ಯೋ ಇವತ್ತಷ್ಟೇ ನೆಟ್ ಪ್ಯಾಕ್ ಹಾಕಿಸಿದ್ದೆ, ಆಗ್ಲೇ 200 ಎಂಬಿ ಖಾಲಿ ಆಗೋಯ್ತಲ್ಲಾ ಅಂತಾ ಚಿಂತೆ ಮಾಡುವವರೇ ಹೆಚ್ಚು. ನಿಮ್ಮ ಡೇಟಾ ಈ ರೀತಿ ಬೇಗ ಖಾಲಿಯಾಗದಂತೆ ಮಾಡೋದ್ಹೇಗೆ ಅಂತಾ ನಾವ್ ಹೇಳ್ತೀವಿ. ಅದ್ರಲ್ಲೂ ವಾಟ್ಸಾಪ್ ನಲ್ಲಿ ಫೋಟೋ, ಆಡಿಯೋ ಮತ್ತು ವಿಡಿಯೋಗಳ ಆಟೋ ಡೌನ್ ಲೋಡ್ ತಪ್ಪಿಸಿ ನೀವು ಡೇಟಾ ಉಳಿಸಬಹುದು. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೆ…

ಹಂತ 1 : ಸೆಟ್ಟಿಂಗ್ಸ್ ಗೆ ಹೋಗಿ, ಚಾಟ್ಸ್ & ಕಾಲ್ಸ್ ಮೇಲೆ ಟ್ಯಾಪ್ ಮಾಡಿ.

ಹಂತ 2 : ಚಾಟ್ಸ್ & ಕಾಲ್ಸ್ ಗೆ ಹೋದ ಬಳಿಕ ಮೀಡಿಯಾ ಆಟೋ ಡೌನ್ ಲೋಡ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ, ನಂತರ ಡೌನ್ ಲೋಡ್ ಪ್ರಕ್ರಿಯೆಗೆ ಮೊಬೈಲ್ ಡೇಟಾ ಬೇಕೋ ಅಥವಾ ವೈಫೈ ಬೇಕೋ ಅನ್ನೋದನ್ನು ಆಯ್ಕೆ ಮಾಡಿಕೊಂಡು ಆನ್ ಮಾಡಿ. ರೋಮಿಂಗ್ ನಲ್ಲೂ ಡೇಟಾ ಆನ್ ಇರಬೇಕೋ ಬೇಡವೋ ಎಂಬುದನ್ನೂ ಆಯ್ಕೆ ಮಾಡಿ.

ಹಂತ 3 : ಮೊಬೈಲ್ ಡೇಟಾಗೆ ಆಟೋ ಡೌನ್ ಲೋಡ್ ಸೆಟ್ಟಿಂಗ್ಸ್ ಕಾನ್ಫಿಗರ್ ಮಾಡಲು ‘ವೆನ್ ಯೂಸಿಂಗ್ ಮೊಬೈಲ್ ಡೇಟಾ’ ಎಂಬುದರ ಮೇಲೆ ಟ್ಯಾಪ್ ಮಾಡಿ. ನಂತರ ಉಳಿದ ಆಯ್ಕೆಗಳನ್ನು ಅನ್ ಚೆಕ್ ಮಾಡಿ.

ಉದಾಹರಣೆಗೆ ವೈಫೈ ಬಳಸುವಾಗ ಮಾತ್ರ ನಿಮಗೆ ಆಟೋ ಡೌನ್ ಲೋಡ್ ಬೇಕು ಎಂದಾದಲ್ಲಿ ‘ವೆನ್ ಕನೆಕ್ಟೆಡ್ ಆನ್ ವೈಫೈ’ ಎಂಬುದರ ಮೇಲೆ ಟ್ಯಾಪ್ ಮಾಡಿ. ಉಳಿದವುಗಳನ್ನೆಲ್ಲ ಅನ್ ಚೆಕ್ ಮಾಡಿ. ಆದ್ರೆ ವಾಯ್ಸ್ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡಬೇಕೇ ಬೇಡವೇ ಎಂಬ ಆಯ್ಕೆಗಳು ನಿಮಗಿಲ್ಲ. ಅವು ಸ್ವಯಂಚಾಲಿತವಾಗಿ ಡೌನ್ ಲೋಡ್ ಆಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...