alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧ ತೆರವಿನ ಖುಷಿಯಲ್ಲಿ ಸ್ಟೇರಿಂಗ್ ಹಿಡಿದ ಮಹಿಳೆಯರು

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಸಾಕಷ್ಟು ಕಟ್ಟುಪಾಡುಗಳಿವೆ. ಮಹಿಳೆಯರು ವಾಹನವನ್ನು ಕೂಡ ಚಲಾಯಿಸಲು ಅವಕಾಶವಿರಲಿಲ್ಲ. ಆದ್ರೀಗ ಕಿಂಗ್ ಸಲ್ಮಾನ್ ಅಬ್ದುಲಜೀಜ್ ಅಲ್ ಸೌದ್ ಆಡಳಿತದಲ್ಲಿ ಸೌದಿ ಅರೇಬಿಯಾದಲ್ಲಿ ಕೂಡ ಮಹಿಳೆಯರಿಗೆ ಒಂದೊಂದೇ ಹಕ್ಕುಗಳು ಸಿಗಲಾರಂಭಿಸಿವೆ.

ಮಹಿಳೆಯರ ವಾಹನ ಚಾಲನೆಗೆ ವಿಧಿಸಲಾಗಿದ್ದ ಬಹಿಷ್ಕಾರವನ್ನು ಕೂಡ ತೆರವು ಮಾಡಲಾಗಿದೆ. ಇನ್ನು 9 ತಿಂಗಳುಗಳ ಕಾಲ ಡ್ರೈವಿಂಗ್ ಲೈಸನ್ಸ್ ಸಿಗೋದಿಲ್ಲ. ಆದ್ರೂ ಬಹಿಷ್ಕಾರ ತೆರವು ಮಾಡಿರೋದ್ರಿಂದ ಅಲ್ಲಿನ ಸ್ತ್ರೀಯರು ಫುಲ್ ಖುಷಿಯಾಗಿದ್ದಾರೆ.

ಬ್ಯಾನ್ ತೆರವು ಮಾಡ್ತಿದ್ದಂತೆ ಮಹಿಳೆಯೆಲ್ಲ ಸ್ಟೇರಿಂಗ್ ಹಿಡಿದಿದ್ರು. ನಗರದಲ್ಲಿ ಹಾಗೇ ಒಂದು ರೌಂಡ್ ಹಾಕಿ ಬಂದ್ರು. 2030ರ ವೇಳೆಗೆ ಸಂಪೂರ್ಣ ಅಭಿವೃದ್ಧಿಯ ಕನಸನ್ನು ಇಟ್ಕೊಂಡು ಸೌದಿ ಸರ್ಕಾರ ಒಂದೊಂದೇ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಕಟ್ಟುಪಾಡುಗಳಿಂದ ಮಹಿಳೆಯರನ್ನು ಮುಕ್ತಗೊಳಿಸ್ತಿದೆ.

ಪ್ರಯಾಣ, ಶಿಕ್ಷಣ, ಮದುವೆ ಮತ್ತು ಉದ್ಯೋಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕು ಅನ್ನೋದು ಎಲ್ಲರ ಒತ್ತಾಯ. ಪುರುಷ ರಕ್ಷಕರಿಲ್ಲದೆ ಮಹಿಳೆ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ ಅನ್ನೋ ನಿಯಮವಿದೆ. ಇದನ್ನು ಕೂಡ ಸರ್ಕಾರ ತೆರವು ಮಾಡಲಿ ಅನ್ನೋದು ಮಹಿಳೆಯರ ನಿರೀಕ್ಷೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...