alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದ ಹುಟ್ಟು ಹಾಕಿದೆ ಪಗಡೆಯಾಡುತ್ತಿರುವ ಮಹಿಳೆಯರ ಫೋಟೊ

ಮೆಕ್ಕಾ ಮಸೀದಿಯ ಆವರಣದಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಪಗಡೆ ಆಡಿರುವುದು ಸೌದಿ ಅರೇಬಿಯಾದಲ್ಲಿ ಮತ್ತೊಂದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಈ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು.

ಕಳೆದ ಶುಕ್ರವಾರ ನಾಲ್ವರು ಮಹಿಳೆಯರು ಮಸೀದಿ ಆವರಣದಲ್ಲಿ ಸೀಕ್ವೆನ್ಸ್ ಎಂಬ ಆಟವನ್ನು ಆಡಿದ್ದಾರಂತೆ. ಇದನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಗಮನಿಸಿದ್ದ. ಕೂಡಲೇ ಮಹಿಳಾ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ, ಮಸೀದಿ ಆವರಣದಲ್ಲಿ ಆಟವಾಡದಂತೆ ಅಲ್ಲಿದ್ದ ಸ್ತ್ರೀಯರಿಗೆ ಸೂಚಿಸಲಾಯ್ತು.

ಅದಕ್ಕೆ ಸಮ್ಮತಿಸಿದ ಮಹಿಳೆಯರು ಕೂಡಲೇ ಅಲ್ಲಿಂದ ತೆರಳಿದ್ದಾರೆ ಅಂತಾ ಮೆಕ್ಕಾ ಮಸೀದಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಇಂಟರ್ನೆಟ್ ನಲ್ಲಿ ಹರಿದಾಡ್ತಿರೋ ಈ ಫೋಟೋ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೆಲವರು ಮಹಿಳೆಯರ ನಡೆಯನ್ನು ಖಂಡಿಸಿದ್ರೆ, ಇನ್ನು ಕೆಲವರು ಮಸೀದಿ ಆವರಣದಲ್ಲಿ ಆಟವಾಡಿದ್ದರಲ್ಲಿ ಯಾವ ತಪ್ಪೂ ಇಲ್ಲ ಅಂತಾ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...