alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ಸೌದಿ ಅರೇಬಿಯಾದ ಮಹಿಳೆಯರು ಈಗ ಸ್ವತಂತ್ರವಾಗಿ ಉದ್ಯಮ ಆರಂಭಿಸಬಹುದು. ಅದಕ್ಕಾಗಿ ಪತಿ ಅಥವಾ ಪುರುಷ ಸಂಬಂಧಿಕರ ಅನುಮತಿ ಪಡೆಯುವ ಅಗತ್ಯವಿಲ್ಲ. ದಶಕಗಳಿಂದ ದೇಶದಲ್ಲಿದ್ದ ಕಠಿಣ ಕಾನೂನನ್ನು ಸಡಿಲಗೊಳಿಸಿದೆ.

ಮಹಿಳೆಯರು ತಮ್ಮ ಸ್ವಂತ ಉದ್ಯಮಕ್ಕೆ ಸರ್ಕಾರದ ಇ-ಸರ್ವೀಸ್ ನೆರವನ್ನು ಸಹ ಪಡೆಯಬಹುದು. ಈ ಮೊದಲು ಸೌದಿಯಲ್ಲಿ ಗಾರ್ಡಿಯನ್ಷಿಪ್ ಸಿಸ್ಟಮ್ ಜಾರಿಯಲ್ಲಿತ್ತು. ಮಹಿಳೆಯರು ತಮ್ಮ ಪತಿ, ಸಹೋದರ ಅಥವಾ ತಂದೆಯ ಅನುಮತಿ ಪತ್ರವನ್ನು ಸಲ್ಲಿಸಬೇಕಿತ್ತು.

ಈವರೆಗೆ ಕೇವಲ ತೈಲ ಉದ್ಯಮವನ್ನೇ ನೆಚ್ಚಿಕೊಂಡಿದ್ದ ಸೌದಿ ಅರೇಬಿಯಾ ಈಗ ಖಾಸಗಿ ವಲಯದ ಕಡೆಗೆ ಗಮನ ಹರಿಸಿದೆ. ಸ್ತ್ರೀ ಉದ್ಯೋಗಕ್ಕೂ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ಮೊದಲ ಬಾರಿಗೆ ಮಹಿಳಾ ತನಿಖಾಧಿಕಾರಿಗಳನ್ನು ಕೂಡ ನೇಮಕ ಮಾಡಿಕೊಳ್ತಿದೆ. ವಿಮಾನ ನಿಲ್ದಾಣ ಮತ್ತು ಗಡಿಯಲ್ಲಿ 140 ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...