alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನಿಗೆ ದುಬಾರಿಯಾಯ್ತು ಬ್ಲಾಗರ್ ಜೊತೆಗಿನ ಚಾಟಿಂಗ್

rj-25

ಸೌದಿ ಅರೇಬಿಯಾದ ಅಪ್ರಾಪ್ತ ಬಾಲಕನೊಬ್ಬನಿಗೆ ಬ್ಲಾಗರ್ ಜೊತೆ ಮಾಡಿದ ಚಾಟ್ ದುಬಾರಿಯಾಗಿ ಪರಿಣಮಿಸಿದೆ.  ಅಮೆರಿಕಾ ಬ್ಲಾಗರ್ ಜೊತೆ ಫ್ಲರ್ಟ್ ಮಾಡಿದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ವಿಡಿಯೋ ವೈರಲ್ ಆಗಿತ್ತು. ಈತನ ಹುಡುಕಾಟ ನಡೆಸಿದ ಪೊಲೀಸರು, ಬಾಲಕನನ್ನು ಬಂಧಿಸಿದ್ದಾರೆ. ಬಾಲಕ ಅಪರಾಧಿ ಎಂಬುದು ಸಾಬೀತಾದ್ರೆ ಮೂರು ವರ್ಷ ಜೈಲು ಶಿಕ್ಷೆಯಾಗಲಿದೆ. ಸೌದಿ ಅರೆಬಿಯಾದ ರಿಯಾದ್ ನಲ್ಲಿ ನೆಲೆಸಿರುವ ಈ ಬಾಲಕನ ಹೆಸರು ಅಬು ಸಿನ್.

ಅಬು, ವಿಡಿಯೋ ಚಾಟಿಂಗ್ ಮೂಲಕ ಅಮೆರಿಕನ್ ಬ್ಲಾಗರ್ ಕ್ರಿಸ್ಟಿನಾ ಕ್ರೊಕೆಟ್ ಗೆ ಪ್ರಪೋಸ್ ಮಾಡಿದ್ದಾನೆ. ಅನೇಕ ಬಾರಿ ‘ಐ ಲವ್ ಯು’ ಹೇಳಿದ್ದಾನೆ. ಇದಕ್ಕೆ ಕ್ರಿಸ್ಟಿನಾ ಪ್ರತಿಕ್ರಿಯೆ ಕೂಡ ನೀಡಿದ್ದಾಳೆ. ನಗ್ತಾ ‘ಐ ಲವ್ ಯು ಟೂ’ ಎಂದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಸೌದಿ ಪೊಲೀಸರು ಅಬು ಹುಡುಕಾಟ ನಡೆಸಿದ್ದಾರೆ. ಸೌದಿ ಕಾನೂನಿನ ಪ್ರಕಾರ ಇದು ಅಪರಾಧ. ಹಾಗಾಗಿ ಆತನನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...