alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ರಾಜ ಮನೆತನದ ಅಮೂಲ್ಯ ಆಭರಣಗಳಿಗೆ ಕನ್ನ

ಸೌದಿ ರಾಜ ಮನೆತನದ ಹತ್ತಾರು ಕೋಟಿ ಬೆಳೆಬಾಳುವ ಆಭರಣಗಳು ಪ್ಯಾರಿಸ್ ನ ಪಂಚತಾರಾ ಹೊಟೇಲ್ ಒಂದರಿಂದ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ಯಾರಿಸ್ ನ ರಿಜ್ ಹೊಟೇಲ್ ಸಿಬ್ಬಂದಿಯನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ಆಭರಣಗಳನ್ನು ಕಳುವು ಮಾಡಿರುವ ವ್ಯಕ್ತಿ ಯಾರು ಅನ್ನೋದು ಗೊತ್ತಾಗಿಲ್ಲ. ಆದ್ರೆ ಇದು ರಿಜ್ ಹೊಟೇಲ್ ನಲ್ಲಿ ನಡೆಯುತ್ತಿರುವ ಎರಡನೇ ಕಳ್ಳತನದ ಪ್ರಕರಣವಾಗಿದೆ. ಕಳುವಾಗಿರುವ ಆಭರಣಗಳ ಮೌಲ್ಯ ಸುಮಾರು 8 ಲಕ್ಷ ಯುರೋಸ್ ಗಳು ಅಂತ ಹೇಳಲಾಗ್ತಿದೆ.

ಆಭರಣಗಳು ಕಳುವಾಗಿರುವ ಜಾಗದಲ್ಲಿ ಯಾವುದೇ ರೀತಿಯಲ್ಲಿ ಕಳ್ಳರ ಪ್ರವೇಶಕ್ಕೆ ಆಸ್ಪದ ಇರಲಿಲ್ಲ. ಬಾಗಿಲು ಮುರಿದೋ ಅಥವಾ ಬೀಗ ತುಂಡರಿಸಿಯೋ ಆಭರಣಗಳನ್ನು ಕಳುವು ಮಾಡಿಲ್ಲ. ಹಾಗಾಗಿ ಪರಿಚಿತರಿಂದಲೇ ಈ ಕೃತ್ಯ ನಡೆದಿರಬಹುದು ಅಂತ ಪೊಲೀಸರು ಅಂದಾಜಿಸಿದ್ದಾರೆ.

ಫ್ರೆಂಚ್ ನ ಸಂಘಟಿತ ಅಪರಾಧಗಳ ತನಿಖಾ ದಳ ಈ ಪ್ರಕರಣದ ತನಿಖೆ ಆರಂಭಿಸಿದೆ. ಇದೇ ವರ್ಷ ಜನವರಿಯಲ್ಲಿ ಶಸ್ತ್ರ ಸಜ್ಜಿತರಾಗಿ ಹೊಟೇಲ್ಗೆ ನುಗ್ಗಿದ ದರೋಡೆಕೋರರು ಹಲವು ಆಭರಣಗಳನ್ನು ಕಳುವು ಮಾಡಿದ್ದರು. ಈಗ ಇದೇ ಹೊಟೇಲ್ನಿಂದ ಸೌದಿ ರಾಜ ಮನೆತನದವರ ಆಭರಣಗಳು ಕಳುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...