alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಜಬ್ ಧರಿಸದ ಫೋಟೋ ಪೋಸ್ಟ್ ಮಾಡಿದ್ದ ಮಹಿಳೆ ಅರೆಸ್ಟ್

saudi-woman_650x400_61481556949

ಸಾರ್ವಜನಿಕ ಸ್ಥಳದಲ್ಲಿ ಹಿಜಬ್ ಧರಿಸದೆ ಫೋಟೋ ತೆಗೆಸಿಕೊಂಡು ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ಸೌದಿ ಅರೇಬಿಯಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಮಲಕ್ ಅಲ್ ಶೆಹ್ರಿ ಎಂಬಾಕೆ ಕಳೆದ ತಿಂಗಳು ಸೌದಿಯ ರಿಯಾದ್ ನಗರಕ್ಕೆ ಬಂದಿದ್ಲು. ಕೆಫೆ ಒಂದರ ಎದುರು ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ಈ ವೇಳೆ ಆಕೆ ಹಿಜಬ್ ಧರಿಸಿರಲಿಲ್ಲ. ಆ ಫೋಟೋವನ್ನು ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಿದ್ಲು. ಸಾರ್ವಜನಿಕ ಸ್ಥಳದಲ್ಲಿ ಮುಸುಕು ಧರಿಸದೇ ಇರುವುದು ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ಧವಾದದ್ದು ಅನ್ನೋ ಟೀಕೆ ಕೇಳಿಬಂದಿತ್ತು.

ಆಕೆಯನ್ನು ಗಲ್ಲಿಗೇರಿಸಬೇಕು ಅಂತೆಲ್ಲಾ ಕೆಲವು ತೀವ್ರವಾದಿಗಳು ಒತ್ತಾಯ ಮಾಡಿದ್ದರು. ಇದೀಗ 20 ರ ಹರೆಯದ ಯುವತಿಯನ್ನು ಪೊಲೀಸರು ಬಂಧಿಸಿದ್ದು, ತಕ್ಕ ಶಿಕ್ಷೆ ವಿಧಿಸುವುದಾಗಿ ಹೇಳುತ್ತಿದ್ದಾರೆ. ಮುಸ್ಲಿಂ ಸಂಪ್ರದಾಯ ಪಾಲಿಸದೇ ಇರುವವರಿಗೆಲ್ಲ ಇದು ಪಾಠವಾಗಬೇಕು ಎನ್ನುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಅವರು ಸದಾ ಮುಸುಕು ಹಾಕಿಕೊಂಡಿರಬೇಕು, ವಾಹನ ಚಲಾಯಿಸುವಂತಿಲ್ಲ ಹೀಗೆ ಹತ್ತಾರು ಬಗೆಯ ನಿರ್ಬಂಧಗಳಿದ್ದು, ಅದನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...