alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ವಿವಾಹವಾಗುವವರಿಗೆ ಇದೆ ಇಷ್ಟೆಲ್ಲಾ ಕಾನೂನು..!

drug-test

ಮಧ್ಯಪ್ರಾಚ್ಯ ರಾಷ್ಟ್ರದ ನಾಗರೀಕರನ್ನು ಮದುವೆಯಾಗಲು ಇಚ್ಛಿಸುವವರಿಗೆ ಡ್ರಗ್ ಟೆಸ್ಟ್ ಹಾಗೂ ಮದುವೆಗೆ ಮುಂಚಿನ ವೈದ್ಯಕೀಯ ಪರೀಕ್ಷೆಯನ್ನು ಸೌದಿ ಅರೇಬಿಯಾ ಕಡ್ಡಾಯಗೊಳಿಸಿದೆ. ಈ ಸಂಬಂಧ ಹೊಸ ಕಾನೂನನ್ನು ಜಾರಿ ಮಾಡಲಾಗಿದೆ. ಸೌದಿ ನಾಗರೀಕರು ಮಾದಕ ದ್ರವ್ಯದ ದಾಸರಾಗಿರುವವರನ್ನು ಮದುವೆಯಾಗುತ್ತಿದ್ದಾರೆ ಎಂದು ಹಲವು ಕುಟುಂಬಗಳು ಆತಂಕ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವರ ಹಾಗು ವಧು ಇಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆರೋಗ್ಯ ಸಚಿವಾಲಯಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ತಪಾಸಣೆ ನಡೆಯಲಿದೆ. 30-55 ವರ್ಷದ ಸೌದಿ ಅರೇಬಿಯಾದ ಮಹಿಳೆ, ಬೇರೆ ದೇಶದವರನ್ನು ಮದುವೆಯಾಗಬೇಕಾದಲ್ಲಿ ಅಥವಾ 40-65 ವರ್ಷದೊಳಗಿನ ಸೌದಿ ಅರೇಬಿಯಾದ ಪುರುಷ ಬೇರೆ ರಾಷ್ಟ್ರದ ಮಹಿಳೆಯನ್ನು ವರಿಸಲು ಮುಂದಾದಲ್ಲಿ ಈ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಹೊಸ ಕಾನೂನಿನ ಪ್ರಕಾರ ಸೌದಿ ಪುರುಷ ವಿದೇಶಿ ಮಹಿಳೆಯನ್ನು ಮದುವೆಯಾಗಲು ಇಚ್ಛಿಸಿದ್ರೆ ಅವನ ಆದಾಯ ಕನಿಷ್ಟ 3000 ಸೌದಿ ರಿಯಾಲ್ಸ್ ಇರಬೇಕು, ಮನೆ ಅಥವಾ ಸ್ವಂತ ಅಪಾರ್ಟ್ ಮೆಂಟ್ ಹೊಂದಿರಬೇಕು. ಆತನ ಭಾವಿ ಪತ್ನಿಗೆ ಕನಿಷ್ಟ 25 ವರ್ಷ ವಯಸ್ಸಾಗಿರಬೇಕು ಮತ್ತು ಇಬ್ಬರ ನಡುವಿನ ವಯಸ್ಸಿನ ಅಂತರ 30 ವರ್ಷ ಮೀರಿರಬಾರದು.

ಅಕಸ್ಮಾತ್ ಸೌದಿ ಮಹಿಳೆ ವಿದೇಶಿ ಯುವಕನನ್ನು ಮದುವೆಯಾಗಲು ಮುಂದಾದ್ರೆ ಇಬ್ಬರ ನಡುವಣ ವಯಸ್ಸಿನ ಅಂತರ 10 ವರ್ಷಕ್ಕಿಂತ ಹೆಚ್ಚಿರಬಾರದು. ಮಹಿಳೆ ಅಂಗವಿಕಲೆ ಅಥವಾ ಅನಾಥೆಯಾಗಿದ್ದಲ್ಲಿ ವಿನಾಯಿತಿ ಇದೆ. ಅರ್ಜಿದಾರ ವಿಚ್ಛೇದಿತನಾಗಿದ್ದಲ್ಲಿ, ಪತ್ನಿಯಿಂದ ದೂರವಾಗಿ ಕನಿಷ್ಟ 2 ವರ್ಷಗಳಾಗಿರಬೇಕು. ಮೊದಲ ಪತ್ನಿಯನ್ನು ತ್ಯಜಿಸಿದ್ದಕ್ಕೆ ಸೂಕ್ತ ಕಾರಣವುಳ್ಳ ಪ್ರಮಾಣಪತ್ರ ಸಲ್ಲಿಸಬೇಕು. ಈ ಮೊದಲು ಸೌದಿ ಅರೇಬಿಯಾದ ಮಹಿಳೆಯನ್ನೇ ಮದುವೆಯಾಗಿ ವಿಚ್ಛೇದನ ಪಡೆದಿದ್ದಲ್ಲಿ ವಿದೇಶೀಯನಿಗೆ ಮತ್ತೊಮ್ಮೆ ಸೌದಿ ಮಹಿಳೆಯನ್ನು ವರಿಸುವ ಅವಕಾಶವಿಲ್ಲ. ಅಷ್ಟೇ ಅಲ್ಲ ಆತ ವಿದೇಶದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರಬಾರದು. ಮದುವೆಗೂ ಮುನ್ನ 12 ತಿಂಗಳ ವ್ಯಾಲಿಡಿಟಿ ಇರುವ ಪಾಸ್ಪೋರ್ಟ್ ಸಲ್ಲಿಸಬೇಕು, ರಾಷ್ಟ್ರೀಯತೆಯನ್ನು ದೃಢೀಕರಿಸಬೇಕು. ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರುವಂತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...