alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯದಲ್ಲೇ ಕೈಕೊಟ್ತು ಸೌದಿ ರಾಜನ ಚಿನ್ನದ ಎಸ್ಕಲೇಟರ್

ಮಾಸ್ಕೋದಲ್ಲಿ ತನ್ನ ಐಷಾರಾಮಿ ಬದುಕು ಪ್ರದರ್ಶಿಸುತ್ತಿದ್ದ ಸೌದಿ ಅರೇಬಿಯಾ ರಾಜನಿಗೆ ಮುಜುಗರ ಉಂಟಾಗಿದೆ.

3.5 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಒಪ್ಪಂದದ ಕುರಿತು ಚರ್ಚಿಸಲು ಸೌದಿ ರಾಜ ಸಲ್ಮಾನ್ ಅಬ್ದುಲ್ ಅಜೀಜ್ ಅಲ್ ಸೌದ್ ಮಾಸ್ಕೋಗೆ ಆಗಮಿಸಿದ್ರು.

ಖಾಸಗಿ ವಿಮಾನದಿಂದ ಇಳಿದ ಸಲ್ಮಾನ್ ಗೆ ಕೆಳಕ್ಕೆ ಇಳಿದು ಬರಲು ಅವರದ್ದೇ ಬಂಗಾರದ ಎಸ್ಕಲೇಟರ್ ಅಳವಡಿಸಲಾಗಿತ್ತು. ಆದ್ರೆ ಎಸ್ಕಲೇಟರ್ ಮಧ್ಯದಲ್ಲೇ ಕೈಕೊಟ್ಟಿದೆ. ಸರಿಹೋಗಬಹುದು ಅನ್ನೋ ನಿರೀಕ್ಷೆಯಲ್ಲಿ ಕಿಂಗ್ ಸಲ್ಮಾನ್ ಸ್ವಲ್ಪ ಹೊತ್ತು ಕಾದು ನೋಡಿದ್ರು.

ಆದ್ರೆ ತಾಂತ್ರಿಕ ತೊಂದರೆಯಿಂದಾಗಿ ಎಸ್ಕಲೇಟರ್ ಚಲಿಸಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಸಲ್ಮಾನ್, ಎಸ್ಕಲೇಟರ್ ಮೆಟ್ಟಿಲುಗಳನ್ನು ಇಳಿದುಕೊಂಡೇ ಕೆಳಕ್ಕೆ ಬಂದಿದ್ದಾರೆ.

ಎಲ್ಲೇ ಹೋದ್ರೂ ಸೌದಿ ರಾಜ ತನ್ನ ಸಂಪತ್ತು, ದೌಲತ್ತಿನ ಪ್ರದರ್ಶನ ಮಾಡ್ತಾರೆ. ಇಂಡೋನೇಷ್ಯಾ ಭೇಟಿ ವೇಳೆ 800 ಪ್ರತಿನಿಧಿಗಳು ಮತ್ತು 620 ಸಹಾಯಕರನ್ನು ಸಲ್ಮಾನ್ ಕೊಂಡೊಯ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...