alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಾವಿದನಿಗೆ ಕಾಲಿಗೆ ಮುತ್ತಿಡು ಎಂದ ಸೌದಿ ರಾಜಕುಮಾರಿ..!

soudhi-kingಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಪುತ್ರಿ ವರ್ಣಚಿತ್ರಕಾರನ ಜೊತೆ ಕಿರಿಕ್ ಮಾಡಿಕೊಂಡು ಪ್ಯಾರಿಸ್ ನಿಂದ ಪರಾರಿಯಾಗಿದ್ದಾಳೆ.

ಸೌದಿ ಅರೇಬಿಯಾದ ರಾಜಕುಮಾರಿ ಹಿಸ್ಸಾಳ ಬಂಗಲೆಯ ಅಲಂಕಾರಕ್ಕಾಗಿ ಚಿತ್ರಕಾರನೊಬ್ಬನನ್ನು ಕರೆಸಲಾಗಿತ್ತು. ಆತ ಮೊಬೈಲ್ ನಲ್ಲಿ ನನ್ನ ಫೋಟೋ ತೆಗೆದು ಮಾಧ್ಯಮಗಳಿಗೆ ಮಾರಾಟ ಮಾಡುತ್ತಿದ್ದಾನೆ ಅನ್ನೋದು ಹಿಸ್ಸಾಳ ಆರೋಪ.

ರೆಡ್ ಹ್ಯಾಂಡಾಗಿ ಕಲಾವಿದನನ್ನು ಹಿಡಿದಿದ್ದೇನೆ ಎಂದ ಸೌದಿ ರಾಜಕುಮಾರಿ, ಆತನನ್ನು ಕಟ್ಟಿಹಾಕುವಂತೆ ಅಂಗರಕ್ಷಕರಿಗೆ ಸೂಚಿಸಿದ್ಲು. ಬಳಿಕ ಆತನಿಗೆ ಕಾಲಿನಿಂದ ಒದ್ದಿದ್ದಾಳಂತೆ, ತನ್ನ ಪಾದಗಳಿಗೆ ಮುತ್ತಿಕ್ಕುವಂತೆ ಕಲಾವಿದನನ್ನು ಒತ್ತಾಯಿಸಿದ್ದಾಳೆ. ಅಷ್ಟೇ ಅಲ್ಲ, ಆತನನ್ನು ಕೊಂದು ಬಿಡುವಂತೆ ಅಂಗರಕ್ಷಕರಿಗೆ ಆದೇಶಿಸಿದ್ದಾಳೆ.

ಕಲಾವಿದನನ್ನು ಕಟ್ಟಿಹಾಕಿದ ಬಾಡಿಗಾರ್ಡ್ ಗಳು ಆತನನ್ನು ಥಳಿಸಿ ಅಲ್ಲಿಂದ ಹೊರದಬ್ಬಿದ್ದಾರೆ. ಮಾಡಿದ ಕೆಲಸಕ್ಕೆ ಹಣವನ್ನು ಸಹ ಕೊಟ್ಟಿಲ್ಲ. ಮತ್ತೆ ಇತ್ತ ಸುಳಿಯದಂತೆ ಎಚ್ಚರಿಸಿದ್ದಾರೆ. ಕಲಾವಿದನ ಮೇಲೆ ಹಲ್ಲೆ ಮಾಡಿದ್ದ ಅಂಗರಕ್ಷಕನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣಳಾದ ರಾಜಕುಮಾರಿ ಮಾತ್ರ ಸದ್ದಿಲ್ಲದೆ ಪ್ಯಾರಿಸ್ ನಿಂದ ಎಸ್ಕೇಪ್ ಆಗಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...