alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿಯಲ್ಲಿರೋ ಭಾರತೀಯರಿಗೆ ಹೊಸ ಸಂಕಷ್ಟ

ಸೌದಿ ಅರೇಬಿಯಾದ ಪರಿಷ್ಕೃತ ನಿತಾಖತ್ ಯೋಜನೆಯಿಂದ ಭಾರತೀಯ ವಲಸಿಗರಿಗೆ ದೊಡ್ಡ ಹೊಡೆತ ಬೀಳಲಿದೆ. 2017ರ ಸೆಪ್ಟೆಂಬರ್ ನಿಂದ ಈ ಯೋಜನೆ ಜಾರಿಗೆ ಬರಲಿದ್ದು, ದೊಡ್ಡ ದೊಡ್ಡ ಸಂಸ್ಥೆಗಳೆಲ್ಲ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲಿವೆ.

ಇದರಿಂದಾಗಿ ಭಾರತದಿಂದ ವಲಸೆ ಹೋಗಿ ಸೌದಿಯಲ್ಲಿ ನೆಲೆಸಿರುವವರಿಗೆ ತೊಂದರೆಯಾಗಬಹುದು. 2016ರ ಮಾಹಿತಿ ಪ್ರಕಾರ ಸುಮಾರು 25 ಲಕ್ಷ ಭಾರತೀಯರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಆದ್ರೆ ವರ್ಷದಿಂದ ವರ್ಷಕ್ಕೆ ವಲಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ.

2016ರಲ್ಲಿ 1.65 ಲಕ್ಷ ಜನರಿಗೆ ಮಾತ್ರ ಸೌದಿ ಅರೇಬಿಯಾಗೆ ವಲಸೆ ಹೋಗಲು ಅನುಮತಿ ದೊರೆತಿದೆ. 2015ಕ್ಕೆ ಹೋಲಿಸಿದ್ರೆ ಈ ಸಂಖ್ಯೆ ಶೇ.46ರಷ್ಟು ಕಡಿಮೆಯಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಕೇರಳದಿಂದ ಅತಿ ಹೆಚ್ಚು ಮಂದಿ ಸೌದಿಗೆ ತೆರಳಿದ್ದಾರೆ.

ಹೊಸ ನಿತಾಖತ್ ಯೋಜನೆ ಪ್ರಕಾರ ಸೌದಿ ಪ್ರಜೆಗಳಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ. ಪ್ಲಾಟಿನಂ, ಹೈಗ್ರೀನ್ ನಂತಹ ಕಂಪನಿಗಳಿಗೆ ಮಾತ್ರ ನ್ಯೂ ಬ್ಲಾಕ್ ವೀಸಾಗಳಿಗೆ ಅವಕಾಶ ಸಿಗಲಿದೆ. ಬಹುತೇಕ ಭಾರತೀಯರೆಲ್ಲ ಬ್ಲೂ ಕಾಲರ್ ವರ್ಕರ್ ಗಳಾಗಿದ್ದು, ಅವರಿಗೆ ತೊಂದರೆಯಾಗೋ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...