alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕನ ಪ್ರೀತಿಗೆ ಬಿದ್ದು ಸೌದಿಯಿಂದ ಭಾರತಕ್ಕೆ ಬಂದ್ಲು ಯುವತಿ

ಸೌದಿ ಅರೇಬಿಯಾದ 26 ವರ್ಷದ ಯುವತಿಯೊಬ್ಬಳು ಭಾರತಕ್ಕೆ ಬಂದು ಚಾಲಕ ಪ್ರೇಮಿ ಜೊತೆ ಮದುವೆಯಾಗಿದ್ದಾಳೆ. ಸೌದಿ ಅರೇಬಿಯಾದಿಂದ ಓಡಿ ನೇಪಾಳಕ್ಕೆ ಬಂದ ಯುವತಿ ಅಲ್ಲಿಂದ ತೆಲಂಗಾಣದ ನಿಜಾಮಾಬಾದ್ ಗೆ ಬಂದಿದ್ದಾಳೆ. ಅಕ್ರಮವಾಗಿ ಭಾರತ ಪ್ರವೇಶ ಮಾಡಿದ ಯುವತಿ 30 ವರ್ಷದ ಪ್ರೇಮಿಯನ್ನು ಮದುವೆಯಾಗಿದ್ದಾಳೆ.

ಸೌದಿ ಅರೇಬಿಯಾದಲ್ಲಿ ಯುವತಿ ತಂದೆ ವಾಹನದ ಚಾಲಕನಾಗಿ ಯುವಕ ಕೆಲಸ ಮಾಡ್ತಿದ್ದ. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಫೆಬ್ರವರಿಯಲ್ಲಿ ಯುವಕ ಭಾರತಕ್ಕೆ ವಾಪಸ್ ಆಗಿದ್ದಾನೆ. ಪ್ರೇಮಿಯನ್ನು ತುಂಬಾ ದಿನ ಬಿಟ್ಟಿರಲು ಸಾಧ್ಯವಿಲ್ಲ. ಹಾಗಾಗಿ ಬೇಗ ಬರ್ತೇನೆಂದು ಯುವತಿ ಹೇಳಿದ್ದಳು ಎನ್ನಲಾಗಿದೆ.

ಮಗಳು ಓಡಿ ಬಂದ ಸಂಗತಿ ತಿಳಿದ ತಂದೆ ಸೌದಿಯಿಂದ ಹೈದ್ರಾಬಾದ್ ಗೆ ಬಂದಿದ್ದಾನೆ. ಪೊಲೀಸ್ ಮುಂದೆ ಹಾಜರಾದ ಯುವತಿ, ಭಾರತದಲ್ಲಿಯೇ ಇರೋದಾಗಿ ಹೇಳಿದ್ದಾಳೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಯುವತಿ ಇಲ್ಲಿಯೇ ನೆಲೆ ನಿಲ್ಲಲು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...