alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸೌದಿ ರಾಜಕುಮಾರನಿಂದಲೇ ಪತ್ರಕರ್ತನ ಕೊಲೆಗೆ ಆದೇಶ

ಪತ್ರಕರ್ತ ಜಮಾಲ್ ಖಶೋಗಿ ಕೊಲೆಯ ಹಿಂದೆ ಸೌದಿಯ ಶಕ್ತಿಶಾಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾತ್ರವಿದೆ ಎಂಬುದಾಗಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತೀರ್ಮಾನಿಸಿದೆ.

ಸಿಐಎ ತನಿಖೆಯ ಪ್ರಕಾರ, ರಾಜಕುಮಾರನ ಆದೇಶದ ಪ್ರಕಾರ 15 ಸೌದಿ ಏಜೆಂಟ್‌ ಗಳು ಸರ್ಕಾರಿ ವಿಮಾನದಲ್ಲಿ ಇಸ್ತಾಂಬುಲ್‌ಗೆ ತೆರಳಿ ಸೌದಿ ರಾಯಭಾರ ಕಚೇರಿಯಲ್ಲಿ ಖಶೋಗಿಯನ್ನು ಕೊಲೆಗೈದಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ ಸಿಐಎ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

ಪತ್ರಕರ್ತ ಟರ್ಕಿಯ ಭಾವಿ ಪತ್ನಿಯನ್ನು ವರಿಸಲು ಅಗತ್ಯ ದಾಖಲೆಗಳನ್ನು ಪಡೆಯಲು ಆ ರಾಯಭಾರ ಕಚೇರಿಗೆ ಹೋಗಿದ್ದ. ಅ.2ರಂದು ನಡೆದಿದ್ದ ಈ ಕೊಲೆ ಪ್ರಕರಣದ ಸಂಬಂಧ ಸೌದಿ ಅರೇಬಿಯಾ ಸರ್ಕಾರ ಪದೇ ಪದೇ ತನ್ನ ಅಧಿಕೃತ ಹೇಳಿಕೆಯನ್ನು ಬದಲಿಸುತ್ತಲೇ ಬಂದಿದೆ. ಆರಂಭದಲ್ಲಿ ಖಶೋಗಿ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂಬುದಾಗಿ ಹೇಳಿತ್ತು. ಬಳಿಕ ಆತನ ಕೊಲೆಯಾಗಿದೆ ಎಂದು ಹೇಳಿತ್ತು. ಈ ಗೊಂದಲದ ಮಧ್ಯೆಯೇ ಅಮೆರಿಕದ ಗುಪ್ತಚರ ಸಂಸ್ಥೆ ಆ ಕೊಲೆಯ ರೂವಾರಿಯೆಂದು ರಾಜಕುಮಾರನತ್ತ ಬೊಟ್ಟು ಮಾಡಿದೆ.

ಪತ್ರಕರ್ತ ಜಮಾಲ್, ಸೌದಿ ರಾಜಕುಮಾರ ಹಾಗೂ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದ. ಲೇಖನಗಳನ್ನು ಬರೆಯುತ್ತಿದ್ದ. ಸೌದಿ ಸರ್ಕಾರ ತನ್ನ ಮೇಲಿನ ಟ್ವಿಟರ್ ನಿರ್ಬಂಧ ಖಂಡಿಸಿ 2017ರಲ್ಲಿ ಸೌದಿಯಿಂದ ಸ್ವಯಂ ಗಡೀಪಾರುಗೊಂಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...