alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹವಾದ ದಿನವೇ ಡೈವೋರ್ಸ್ !

Indian bridal handಈಗ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ವಿವಾಹ ವಿಚ್ಚೇದನ ಪಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹವಾದ ದಿನದಂದೇ ವರನೊಬ್ಬ ತನ್ನ ಪತ್ನಿಯ ಮೇಲೆ ಮುನಿಸಿಕೊಂಡು ವಿಚ್ಚೇದನ ನೀಡಲು ಮುಂದಾಗಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಬೆಳಿಗ್ಗೆಯಷ್ಟೇ ಇವರ ವಿವಾಹ ಅತಿಥಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಬಳಿಕ ವಧು- ವರರು ತಮಗಾಗಿ ಬುಕ್ ಮಾಡಲಾಗಿದ್ದ ಹೋಟೆಲ್ ರೂಮಿಗೆ ಹೋಗಿದ್ದಾರೆ. ಈ ವೇಳೆ ವಧು ತನ್ನ ಸ್ನೇಹಿತರ ಜೊತೆ ನಿರಂತರ ಚಾಟಿಂಗ್ ಹಾಗೂ ಫೋನ್ ಕಾಲ್ ನಲ್ಲಿ ಮುಳುಗಿ ಹೋಗಿದ್ದಾಳೆ.

ವಿವಾಹವಾಗಿದ್ದಾಕೆಗೆ ಅಭಿನಂದಿಸಿ ಆಕೆಯ ಸ್ನೇಹಿತರು ಮೊಬೈಲ್ ಸಂದೇಶ ಹಾಗೂ ಫೋನ್ ಕರೆಗಳನ್ನು ಮಾಡುತ್ತಿದ್ದು, ವಧು ಅದಕ್ಕೆ ಉತ್ತರಿಸುವುದರಲ್ಲೇ ಬ್ಯುಸಿಯಾಗದ್ದಾಳೆ. ವರ ಮಾತನಾಡಿಸಲೂ ಯತ್ನಿಸಿದರೂ ಆಕೆ ಮಾತ್ರ ತನ್ನದೇ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾಳೆ. ಅಂತಿಮವಾಗಿ ವರ, ನನಗಿಂತ ನಿನಗೆ ಸ್ನೇಹಿತರೇ ಮುಖ್ಯನಾ ಎಂದು ಕೇಳಿದ್ದು, ಆಕೆ ಹೌದೆಂದು ಉತ್ತರಿಸಿದ್ದಾಳೆ. ವಿಚ್ಚೇದನಕ್ಕೆ ಇಷ್ಟೇ ಸಾಕಾಗಿದ್ದು, ಆಕೆಯ ಮಾತಿನಿಂದ ಮುನಿಸಿಕೊಂಡ ವರ ಒಬ್ಬಳನ್ನೇ ಹೋಟೆಲ್ ರೂಮಿನಲ್ಲಿ ಬಿಟ್ಟು ಹೋಗಿದ್ದಾನೆ. ಅಲ್ಲದೇ ಆಕೆಯಿಂದ ತನಗೆ ವಿಚ್ಚೇದನ ಕೊಡಿಸಬೇಕೆಂದು ಈಗ ಕೋರ್ಟ್ ಮೆಟ್ಟಿಲೇರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...