alex Certify
ಕನ್ನಡ ದುನಿಯಾ       Mobile App
       

Kannada Duniya

2018ರಲ್ಲಿ ಸೌದಿಯಲ್ಲಿ ತೆರೆಯಲಿದೆ ಸಿನಿಮಾ ಹಾಲ್

ಸೌದಿ ಅರೇಬಿಯಾ ಸಿನಿ ಪ್ರಿಯರಿಗೊಂದು ಖುಷಿ ಸುದ್ದಿ. ಸೌದಿ ಅರೇಬಿಯಾ ಸರ್ಕಾರ ಸೋಮವಾರ ಮಹತ್ವದ ಘೋಷಣೆ ಮಾಡಿದೆ. ಥಿಯೇಟರ್ ತೆರೆಯಲು ಪರವಾನಿಗೆ ನೀಡುವುದಾಗಿ ಘೋಷಣೆ ಮಾಡಿದೆ.

ಮುಂದಿನ ವರ್ಷ ಥಿಯೇಟರ್ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗುವುದು. ಸುದ್ದಿ ಸಂಸ್ಥೆ ಮಾಹಿತಿ ಪ್ರಕಾರ ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವದ್ ಬಿನ್ ಸಲೇಹ್ ಥಿಯೇಟರ್ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲ ಥಿಯೇಟರ್ ಮಾರ್ಚ್ 2018ರಲ್ಲಿ ನಿರ್ಮಾಣವಾಗುವ ಭರವಸೆಯಿದೆ ಎಂದು ಸಲೇಹ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸೌದಿಯಲ್ಲಿ ಥಿಯೇಟರ್ ತೆರೆಯುವ ಬೇಡಿಕೆ ಹೆಚ್ಚಾಗಿತ್ತು. ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಭ್ರಷ್ಟಾಚಾರ ನಿಗ್ರಹ ಸೇರಿದಂತೆ 2030ರ ಸುಧಾರಣಾ ಯೋಜನೆಯಲ್ಲಿ ಇದೂ ಒಂದು ಎಂದು ಸಲೇಹ್ ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರಿಗೆ ಇತ್ತೀಚೆಗಷ್ಟೇ ಚಾಲನಾ ಪರವಾನಿಗೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...