alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರವನ್ನು ವಿರೋಧಿಸಿದವರಿಗೆ 5 ವರ್ಷ ಜೈಲು…! 

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕಾರ್ಯವನ್ನು ಅಣಕಿಸಿದರೆ, ವಿರೋಧಿಸಿದರೆ ಇನ್ನು ಮುಂದೆ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಂತ ಸಾಮಾಜಿಕ ಜಾಲತಾಣದಲ್ಲಿರುವ ಭಾರತೀಯರು ಈ ಬಗ್ಗೆ ಗಾಬರಿಯಾಗಬೇಕಿಲ್ಲ. ಏಕೆಂದರೆ ಇಂಥದ್ದೊಂದು ಘೋಷಣೆ ಹೊರಡಿಸಿರುವುದು ಸೌದಿ ಅರೇಬಿಯಾದ ಸರ್ಕಾರ.

ಟ್ವಿಟರ್‍ನಲ್ಲಿ 14 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿರುವ ಸಲ್ಮಾನ್ ಅಲ್ ಅಹ್ದಾ ಅವರನ್ನು ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದ ಬೆನ್ನಿಗೇ ಇಂಥದ್ದೊಂದು ಘೋಷಣೆ ಹೊರಬಿದ್ದಿದೆ. ಸೌದಿ ಸರ್ಕಾರ, ಕತಾರ್ ವಿರುದ್ದ ಕ್ರಮ ಕೈಗೊಂಡಿದ್ದ ವೇಳೆ ಅದನ್ನು ವಿರೋಧಿಸಿದ್ದಕ್ಕೆ ಸಲ್ಮಾನ್ ಅವರನ್ನು ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು.

ಸಾರ್ವಜನಿಕ ವ್ಯವಸ್ಥೆಗೆ ಅಡ್ಡಿಪಡಿಸುವಂತಹ ಯಾವುದೇ ಅಣಕ ಅಥವಾ ವಿಡಂಬನೆ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸೌದಿ ಸರ್ಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...