alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಮಹಿಳೆಯರ ಮೇಲಿದ್ದ ಮತ್ತೊಂದು ಕಟ್ಟುಪಾಡು ಸಡಿಲ

ಅತ್ಯಂತ ಸಂಪ್ರದಾಯವಾದಿ ರಾಷ್ಟ್ರ ಎನಿಸಿಕೊಂಡಿದ್ದ ಸೌದಿ ಅರೇಬಿಯಾದಲ್ಲಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸುತ್ತಿದೆ. ನೂತನ ರಾಜ ಸಲ್ಮಾನ್ ಮತ್ತವರ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಒಂದೊಂದಾಗಿಯೇ ಸಡಿಲಗೊಳ್ಳುತ್ತಿವೆ.

ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಸೌದಿ ಅರೇಬಿಯಾದ ಸೇನೆ ಸೇರಲು ಅವಕಾಶ ಮಾಡಿಕೊಡಲಾಗಿದೆ. ರಿಯಾದ್, ಮೆಕ್ಕಾ, ಅಲ್-ಖಾಸಿಂ ಮತ್ತು ಅಲ್ ಮದೀನಾದಲ್ಲಿ ನೆಲೆಸಿರುವ ಮಹಿಳೆಯರು ಯೋಧರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೇನೆ ಸೇರುವ ಮಹಿಳೆಯರಿಗೆ ಯುದ್ಧಕ್ಕೆ ತೆರಳಲು ಅವಕಾಶವಿಲ್ಲ. ಆದ್ರೆ ಇವರನ್ನು ಭದ್ರತೆಗೆ ನೇಮಕ ಮಾಡಲಾಗುತ್ತದೆ. ಹೈಸ್ಕೂಲ್ ಡಿಪ್ಲೊಮಾ ಓದಿರುವ 25-35 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಬೇರೆ ದೇಶದವರನ್ನು ಮದುವೆಯಾಗಿರುವ ಮಹಿಳೆಯರಿಗೆ ಸೇನೆ ಸೇರಲು ಅವಕಾಶವಿಲ್ಲ.

ಕೆಲ ತಿಂಗಳುಗಳ ಹಿಂದಷ್ಟೆ ಮಹಿಳೆಯರಿಗೆ ವಾಹನ ಚಲಾಯಿಸಲು ಸೌದಿ ಸರ್ಕಾರ ಅನುಮತಿ ನೀಡಿತ್ತು. ಅದಾದ್ಮೇಲೆ ಮೈದಾನದಲ್ಲಿ ಕುಳಿತು ಫುಟ್ಬಾಲ್ ಪಂದ್ಯ ವೀಕ್ಷಿಸಲು ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿತ್ತು. ಪತಿ ಅಥವಾ ಪುರುಷ ಸಂಬಂಧಿಕರ ಅನುಮತಿಯಿಲ್ಲದೇ ಸ್ವಂತ ಉದ್ಯಮ ಆರಂಭಿಸಲು ಸಹ ಸೌದಿ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...