alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಾಟ್ಸಾಪ್ ಗ್ರೂಪ್ ಆರಂಭವಾಗಿರುವುದೇಕೆ ಗೊತ್ತಾ?

mus

ಸಾಮಾಜಿಕ ಜಾಲತಾಣ ವಾಟ್ಸಾಪ್ ಹೇಗೆಲ್ಲಾ ಬಳಕೆಯಾಗ್ತಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ.

ಸೌದಿ ಅರೇಬಿಯಾದಲ್ಲಿ 1 ಕ್ಕಿಂತ ಹೆಚ್ಚಿನ ಮದುವೆಯಾಗಲು ಮುಂದಾದ ಪುರುಷರು, ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಆರಂಭಿಸಿದ್ದಾರೆ.

ತಮಗೆ ಮದುವೆಯಾಗಲು ಮಹಿಳೆಯರನ್ನು ಹುಡುಕಿಕೊಳ್ಳಲು ಇದನ್ನು ಬಳಸಿಕೊಳ್ಳತೊಡಗಿದ್ದಾರೆ. ಸೌದಿ ಅರೇಬಿಯಾದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಿಚ್ಛೇದಿತರಿದ್ದಾರೆ.

ಕೆಲವರಂತೂ 1 ಕ್ಕಿಂತ ಹೆಚ್ಚು ಮದುವೆಯಾದವರಿದ್ದಾರೆ. ಹೀಗೆ ವಧು ಹುಡುಕಲು ವಾಟ್ಸಾಪ್ ಮೊರೆ ಹೋಗಿದ್ದ ಪುರುಷರಿಗೆ ಸಖತ್ ರೆಸ್ಪಾನ್ಸ್ ಬಂದಿದೆ.

ಮೊರಾಕ್ಕೋ, ಯೆಮನ್, ಪ್ಯಾಲೇಸ್ತಿನ್, ಸಿರಿಯಾ, ಪಾಕಿಸ್ತಾನ, ಬಾಂಗ್ಲಾ, ಚೀನಾ ಮೊದಲಾದ ಕಡೆಗಳಿಂದ ಯುವತಿಯರು, ಮಹಿಳೆಯರು, ವಿಚ್ಛೇದಿತೆಯರು ಮದುವೆಯಾಗಲು ಮುಂದೆ ಬಂದಿದ್ದಾರೆ.

ಒಂದಲ್ಲ ಎರಡಲ್ಲ, ನಾಲ್ಕನೇ ಮದುವೆಯಾದರೂ ಅಡ್ಡಿಯಿಲ್ಲ, ನಾವು ರೆಡಿ ಎಂದು 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಹೇಳಿಕೊಂಡಿದ್ದಾರೆ. ಕೆಲವರಂತೂ ತಮ್ಮ ಎತ್ತರ, ಬಣ್ಣ, ದೇಹ ರಚನೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

2016 ರ ಅಕ್ಟೋಬರ್ ವರೆಗೆ ½ ಮಿಲಿಯನ್ ಗೂ ಅಧಿಕ ಮಂದಿ 1 ಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದರು. ಅವರಲ್ಲಿ 60-64 ವರ್ಷ ವಯೋಮಿತಿಯ 16,000 ಪುರುಷರು ತಲಾ ಮೂವರನ್ನು ಮದುವೆಯಾಗಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...