alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರ ಜೊತೆ ಪಾರ್ಟಿ ಮಾಡಿದ್ದ ಮಹಿಳೆಯರ ಅರೆಸ್ಟ್

moral-police

ಸೌದಿ ಅರೇಬಿಯಾದಲ್ಲೂ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಪುರುಷರ ಜೊತೆ ಕುಡಿದು ಡ್ಯಾನ್ಸ್ ಮಾಡ್ತಾ ಇದ್ರು ಅನ್ನೋ ಕಾರಣಕ್ಕೆ ನೈತಿಕ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದು ಬಳಿಕ ಪೊಲೀಸರು ವಿಚಾರಣೆಗಾಗಿ ಈ ಮಹಿಳೆಯರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಸೌದಿ ಅರೇಬಿಯಾ ಸಾಂಪ್ರದಾಯಿಕ ಮುಸ್ಲಿಂ ರಾಷ್ಟ್ರವಾಗಿದ್ದು, ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಪುರುಷರ ಜೊತೆ ಸೇರಿ ಪಾರ್ಟಿ ಮಾಡುವಂತಿಲ್ಲ. ಪಾಶ್ಚಿಮಾತ್ಯ ಉಡುಪು ಧರಿಸಿದ್ದ ಮಹಿಳೆಯರಿಬ್ಬರು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಟೆರೆಸ್ ಮೇಲೆ ಪುರುಷರ ಜೊತೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಕೂಡಲೇ ಜೆಡ್ಡಾ ಪೊಲೀಸರು ಮಹಿಳೆಯರ ಬಂಧನಕ್ಕಾಗಿ ಮೇಜರ್ ಜನರಲ್ ಸಯೀದ್ ಅಲ್ ಕಾರ್ನಿ ನೇತೃತ್ವದ ವಿಶೇಷ ಪಡೆಯನ್ನೇ ರಚಿಸಿದ್ದರು. ಪಾರ್ಟಿ ನಡೆದ ಸ್ಥಳ ಪತ್ತೆ ಮಾಡಿದ ಪೊಲೀಸರು ಅದರ ಆಯೋಜಕ ಹಾಗೂ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೌದಿ ಅರೇಬಿಯಾ ಮತ್ತು ಅರಬ್ ರಾಷ್ಟ್ರಗಳಲ್ಲಿ ಮದ್ಯ ನಿಷೇಧವಿದೆ, ಜೊತೆಗೆ ಪುರುಷರು, ಮಹಿಳೆಯರು ಇಷ್ಟು ಸ್ನೇಹದಿಂದಿರಲು ಅವಕಾಶವೂ ಇಲ್ಲ. ಪ್ರಕರಣವನ್ನು ತನಿಖಾ ದಳಕ್ಕೆ ಹಸ್ತಾಂತರಿಸಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...