alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ಧರಿಸಲು ಮಹಿಳೆಯರಿಗೆ ಸಿಕ್ತಿದೆ ಚಾನ್ಸ್

bikini

ಸೌದಿ ಅರೇಬಿಯಾ ಸಂಪ್ರದಾಯವಾದಿ ರಾಷ್ಟ್ರ. ಮಹಿಳೆಯರಿಗಂತೂ ಅಲ್ಲಿ ಸ್ವಾತಂತ್ರ್ಯವೇ ಇಲ್ಲ. ಮಹಿಳೆಯರು ಧರಿಸೋ ಬಟ್ಟೆಗಳ ಮೇಲೂ ಸಾಕಷ್ಟು ನಿರ್ಬಂಧಗಳಿವೆ. ಆದ್ರೀಗ ಈ ನಿರ್ಬಂಧಗಳನ್ನೆಲ್ಲ ಸಡಿಲಿಸಲು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪ್ರಯತ್ನ ಆರಂಭಿಸಿದ್ದಾರೆ.

ಸೌದಿ ಅರೇಬಿಯಾದ ವಾಯುವ್ಯ ಕರಾವಳಿಯಲ್ಲಿ ವಿನೂತನ ಐಷಾರಾಮಿ ರೆಡ್ ಸೀ ರೆಸಾರ್ಟ್ ಒಂದನ್ನು ಆರಂಭಿಸಲಾಗ್ತಿದೆ. ಇಲ್ಲಿ ಮಹಿಳೆಯರ ಉಡುಪುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಅವರು ತಮಗಿಷ್ಟ ಬಂದ ಬಟ್ಟೆಗಳನ್ನು ಧರಿಸಬಹುದು. ಬಿಕಿನಿ ಕೂಡ ಹಾಕಬಹುದು.

ಬೀಚ್ ನಲ್ಲಿ ಬಿಕಿನಿ ಧರಿಸಬೇಕು ಅನ್ನೋ ಆಸೆಯಿರುವ ಮಹಿಳೆಯರೆಲ್ಲ ಇಲ್ಲಿಗೆ ಬರಬಹುದು. ದುಬೈ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ಆದ್ರೆ ಇಂತಹ ಕೆಲವು ನಿರ್ಬಂಧಗಳಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತಿದೆ. ಅದನ್ನು ತಪ್ಪಿಸಲು ಹೊಸ ಪ್ರಯತ್ನಕ್ಕೆ ಕೈಹಾಕಲಾಗಿದೆ.

ಈ ರೆಸಾರ್ಟ್ ನಲ್ಲಿ ಪ್ಯಾರಾಚೂಟಿಂಗ್, ಟ್ರೆಕ್ಕಿಂಗ್, ರಾಕ್ ಕ್ಲೈಂಬಿಗ್ ಕೂಡ ಇರಲಿದೆ. ಸ್ಪಾ, ವೈಲ್ಡ್ ಲೈಫ್ ಎಕ್ಸ್ ಪೀರಿಯನ್ಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. 2022ರ ವೇಳೆಗೆ ಈ ಸುಂದರ ರೆಸಾರ್ಟ್ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...