alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿಯಲ್ಲಿ ಇನ್ಮುಂದೆ ಕಾರು ಚಲಾಯಿಸಬಹುದು ಮಹಿಳೆಯರು

ಸೌದಿ ಅರೆಬಿಯಾದ ಮಹಿಳೆಯರಿಗೆ ಗಾಡಿ ಓಡಿಸುವ ಅವಕಾಶ ಸಿಕ್ಕಿದೆ. ಸೌದಿ ಅರೆಬಿಯಾದ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಸೌದಿ ಷಾ ಮೊಹಮ್ಮದ್ ಬಿನ್ ಸಲ್ಮಾನ್ ಮಹಿಳೆಯರಿಗೆ ಚಾಲನಾ ಪರವಾನಿಗೆ ಹಕ್ಕನ್ನು ನೀಡಿದ್ದಾರೆ. ಈ ಆದೇಶ ಜೂನ್ 24, 2018ರವರೆಗೆ ಜಾರಿಯಲ್ಲಿರಲಿದೆ.

ಸೌದಿ ಅರೆಬಿಯಾ ಸರ್ಕಾರ ಮಹಿಳೆಯರ ಪರ ಸಕಾರಾತ್ಮಕ ನಿರ್ಧಾರವೊಂದನ್ನು ಕೈಗೊಂಡಿದೆ. ಇದ್ರಿಂದ ಮಹಿಳೆಯರಿಗೆ ಹೊಸ ಅವಕಾಶ ಸಿಕ್ಕಂತಾಗ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೆಬಿಯಾದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.  ಸೌದಿ ಅರೆಬಿಯಾದ ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಟ್ವೀಟರ್ ನಲ್ಲಿ ಮಂಗಳವಾರ ಈ ವಿಷ್ಯವನ್ನು ತಿಳಿಸಿದೆ. ಇದಕ್ಕಾಗಿ ಒಂದು ಕಮಿಟಿ ರಚಿಸಲಾಗಿದೆ. ಈ ಕಮಿಟಿ ಒಂದು ತಿಂಗಳೊಳಗೆ ವರದಿ ನೀಡಲಿದೆ.

ಸೌದಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಮಹಿಳೆಯರಿಗೆ ಅನೇಕ ನಿರ್ಬಂಧಗಳಿವೆ. ಮಹಿಳೆಯರು ವಾಹನ ಚಲಾಯಿಸುವಂತಿರಲಿಲ್ಲ. ಮೊಹಮ್ಮದ್ ಬಿನ್ ಸಲ್ಮಾನ್ ಮಿಷನ್ 2030 ಎಂಬ ಯೋಜನೆ ಶುರುಮಾಡಿದ್ದಾರೆ. ಇಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ಸಿಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...