alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಕ್ಕೆ ಕ್ರೀಡಾ ಮಾನ್ಯತೆ ನೀಡಿದ ಸೌದಿ ಅರೇಬಿಯಾ

ವಿಶ್ವದಾದ್ಯಂತ ಜನ ಮನ್ನಣೆ ಗಳಿಸಿರುವ ಯೋಗ ಈಗ ಸೌದಿ ಅರೇಬಿಯಾಕ್ಕೂ ಕಾಲಿಟ್ಟಿದೆ. ಸೌದಿ ಅರೇಬಿಯಾದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಯೋಗವನ್ನು ಕ್ರೀಡಾ ಚಟುವಟಿಕೆ ಪಟ್ಟಿಗೆ ಸೇರಿಸಿದೆ. ಹಾಗಾಗಿ ಇನ್ಮುಂದೆ ಯೋಗದಲ್ಲಿ ಆಸಕ್ತಿಯುಳ್ಳವರು ಪರವಾನಿಗೆ ಪಡೆದು ಯೋಗ ಕಲಿಸುವ ಕೆಲಸ ಶುರುಮಾಡಬಹುದು.

ಸೌದಿ ಅರೇಬಿಯಾದಲ್ಲಿ ಯೋಗಕ್ಕೆ ಈ ಸ್ಥಾನ ಸಿಗಲು ನೌಫ್ ಮರ್ವಾಯಿ ಕಾರಣರಾಗಿದ್ದಾರೆ. ಅವರು ದೇಶದ ಮೊದಲ ಮಹಿಳಾ ಯೋಗ ಶಿಕ್ಷಕರಾಗಿದ್ದಾರೆ. ಅರೇಬಿಕ್ ಯೋಗಾಚಾರ್ಯ ಎಂದೇ ಕರೆಯಲ್ಪಡುವ ನೌಫ್ 2010ರಲ್ಲಿ ಅರಬ್ ಯೋಗ ಫೌಂಡೇಶನ್ ಶುರುಮಾಡಿದ್ದರು. ಅವರು ಜೆಡ್ಡಾದಲ್ಲಿ ರಿಯಾದ್ ಚೀನಿ ಮೆಡಿಕಲ್ ಸೆಂಟರ್ ತೆರೆದಿದ್ದಾರೆ. ಅಲ್ಲಿ ಆಯುರ್ವೇದ ಹಾಗೂ ಯೋಗದ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಇಸ್ಲಾಂ ಮೂಲಭೂತ ಧೋರಣೆಗಳನ್ನು ಹೊಂದಿರುವ ಸೌದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಜೂನ್ 21 ಅಂತರಾಷ್ಟ್ರೀಯ ಯೋಗ ದಿನದಂದು ಸೌದಿಯ ಅನೇಕ ಭಾರತೀಯ ಶಾಲೆಗಳಲ್ಲಿ ಯೋಗ ತರಬೇತಿ ನೀಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...