alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಅರೇಬಿಯಾದಲ್ಲಿ ಮತ್ತೆ ಮಹಿಳೆಯರಿಗೆ ಹಿನ್ನಡೆ

af-21

ಸೌದಿ ಅರೇಬಿಯಾದಲ್ಲಿ ಮತ್ತೆ ಮಹಿಳೆಯರಿಗೆ ಹಿನ್ನಡೆಯಾಗಿದೆ. ಡ್ರೈವಿಂಗ್ ಅಧಿಕಾರ ಕೊಡಲು ಸೌದಿ ಸರ್ಕಾರ ಮತ್ತೆ ನಿರಾಕರಿಸಿದೆ. ದೇಶದ ಸಂಸದೀಯ ಮಂಡಳಿ ಮಹಿಳೆಯರಿಗೆ ಚಾಲನೆ ಅಧಿಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಿಳೆಯರಿಗೆ ಡ್ರೈವಿಂಗ್ ಅಧಿಕಾರ ನೀಡುವ ವಿಚಾರದಲ್ಲಿ ಸೌದಿ ಅರೇಬಿಯಾದ ಚಾಲನಾ ಇಲಾಖೆಯ ಸಹಮತವಿದೆ. ಆದ್ರೆ ಸರ್ಕಾರ  ಇದಕ್ಕೆ ವಿರೋಧ ವ್ಯಕ್ತಪಡಿಸ್ತಿದೆ. ಕೇವಲ ಪುರುಷರಿಗೆ ಮಾತ್ರ ಚಾಲನಾ ಪರವಾನಿಗೆ ನೀಡುವ ಕಾನೂನು ದೇಶದಲ್ಲಿ ಜಾರಿಯಲ್ಲಿದೆ.

ಸೌದಿ ಅರೇಬಿಯಾದ ಬಹುತೇಕ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳಾ ವಿರೋಧಿ ಕಾನೂನುಗಳನ್ನು ರದ್ದುಪಡಿಸುವಂತೆ ಇತ್ತೀಚೆಗಷ್ಟೆ 14 ಸಾವಿರ ಮಹಿಳೆಯರು ಮನವಿ ಪತ್ರ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...