alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮದ ಹೆಸರಿನಲ್ಲಿ ಭಕ್ತೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಬಾಬಾ

ರಷ್ಯಾದ ನೆರೆ ದೇಶ ಬಲ್ಗೇರಿಯಾದಲ್ಲಿ ಅತ್ಯಾಚಾರಿ ಬಾಬಾ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತ ಬಾಬಾ ಸೆರ್ಗೆಯ್ ಕಿರೆಂಕೊ ನೂರಾರು ಮಹಿಳಾ ಭಕ್ತೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಎನ್ನಲಾಗಿದೆ. ಮೂಲತಃ ರಷ್ಯಾದವನಾಗಿದ್ದ ಈತ ಬಲ್ಗೇರಿಯಾದಲ್ಲಿ ಭಕ್ತಿ ಹೆಸರಿನಲ್ಲಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ಭಕ್ತರು ರಷ್ಯಾದಲ್ಲಿಯೂ ಇದ್ದಾರೆನ್ನಲಾಗಿದೆ. ಹುಡುಗಿಯರ ಅಶ್ಲೀಲ ವಿಡಿಯೋವನ್ನು ಈತ ಮಾಡ್ತಿದ್ದ ಎನ್ನಲಾಗಿದೆ.

ಧರ್ಮದ ಹೆಸರಿನಲ್ಲಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಸೆರ್ಗೆಯ್ ನಂತ್ರ ತನ್ನ ಸಹಾಯಕರಿಂದ ಹುಡುಗಿಯರ ರೇಪ್ ಮಾಡಿಸ್ತಿದ್ದ. ಅದ್ರ ವಿಡಿಯೋ ಮಾಡಿ ಹುಡುಗಿಯರಿಗೆ ಬ್ಲಾಕ್ಮೇಲ್ ಮಾಡ್ತಿದ್ದ. ಶ್ರೀಮಂತರ ಜೊತೆ ಮಲಗುವಂತೆ ಒತ್ತಡ ಹೇರುತ್ತಿದ್ದ. ಇದ್ರಿಂದ ಸಾಕಷ್ಟು ಹಣ ಮಾಡ್ತಿದ್ದ ಸೆರ್ಗೆಯ್ ಮೊದಲು ಫಿಟ್ನೆಸ್ ತರಬೇತುದಾರನಾಗಿದ್ದ ಎನ್ನಲಾಗಿದೆ.

41 ವರ್ಷದ ಸೆರ್ಗೆಯ್ ತಾನೇ ಬಾಬಾ ಎಂದು ಘೋಷಣೆ ಮಾಡಿಕೊಂಡಿದ್ದ. ಪ್ರವಚನದ ಹೆಸರಿನಲ್ಲಿ ಅನೇಕ ಭಕ್ತರನ್ನು ಗಳಿಸಿದ್ದ. ಎರಡೇ ವರ್ಷದಲ್ಲಿ ದೊಡ್ಡ ನೆಟ್ವರ್ಕ್ ಹೊಂದಿದ್ದ ಬಾಬಾ ಹುಡುಗಿಯರ ಜೊತೆ ಸಂಬಂಧ ಬೆಳೆಸಿ ಅದ್ರ ವಿಡಿಯೋ ಮಾಡಿ ಮಾರಾಟ ಮಾಡಿದ್ದ. ಭಕ್ತೆಯರು ಈತ ಹೇಳಿದಂತೆ ಕುಣಿಯದಿದ್ದಲ್ಲಿ ಕುಟುಂಬದವರ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...