alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಹೆಸರಲ್ಲಿ ಮಾರಾಟವಾಗ್ತಿದೆ ಆಟಿಕೆ…!

ಆರು ವರ್ಷದ ಪುಟ್ಟ ಪೋರ ಯೂಟ್ಯೂಬ್ ಸ್ಟಾರ್. ಈ ಬಾಲಕ ಆಟಿಕೆಗಳನ್ನು ವಿಮರ್ಶೆ ಮಾಡ್ತಾ ಇದ್ದರೆ, ಅಭಿಮಾನಿಗಳು ಉತ್ಸಾಹದಿಂದ ನೋಡುತ್ತಾರೆ. ಈ ವಿಮರ್ಶಕನ ಹೆಸರಿನಲ್ಲಿ ಅಮೆರಿಕದ ವಾಲ್ ಮಾರ್ಟ್ ಮಳಿಗೆಗಳಲ್ಲಿ ಆಟಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಆನ್ ಲೈನ್ ನಲ್ಲಿ ಈ ಗೊಂಬೆಗಳು ಲಭ್ಯವಿವೆ.

ರಯಾನ್ ಟಾಯ್ ರಿವ್ಯೂ ಎಂಬ ಹೆಸರಿನ ಚಾನೆಲ್ ನಲ್ಲಿ ಈ ಬಾಲಕ ಆಟಿಕೆಗಳ ವಿಮರ್ಶೆ ಮಾಡಿ ಸ್ಟಾರ್ ಆಗಿದ್ದಾನೆ. ಅಲ್ಲದೆ ಕಳೆದ ವರ್ಷ ಇದರಿಂದಲೇ 11 ಮಿಲಿಯನ್ ಡಾಲರ್ ಜೇಬಿಗೆ ಇಳಿಸಿಕೊಂಡಿದ್ದಾನೆ.

ರಯಾನ್ ಕಳೆದ ವರ್ಷ ಯೂಟ್ಯೂಬ್ ನಿಂದ ಅತಿ ಹೆಚ್ಚು ಸಂಭಾವನೆ ಪಡೆದ ಎಂಟನೇಯ ಸ್ಟಾರ್. ಪ್ರತಿ ತಿಂಗಳು ಈ ವಿಮರ್ಶಕನ ಚಾನೆಲ್ ಗೆ ಸುಮಾರು 1 ಬಿಲಿಯನ್ ವ್ಯೂವ್ಸ್ ಸಿಗುತ್ತದೆ. ಅಲ್ಲದೆ ಒಂದೂವರೆ ಕೋಟಿಗೂ ಹೆಚ್ಚು ಜನ ಸಬ್ ಸ್ಕೈಬರ್ಗಳಿದ್ದಾರೆ. ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ರಯಾನ್ ಹೆಸರಿನ ಆಟಿಕೆಗಳು ಆಕರ್ಷಿಸಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...