alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಕ್ ನ್ಯೂಸ್ ಡಿಲೀಟ್ ಮಾಡದಿದ್ದರೆ ಒಂದು ವರ್ಷ ಜೈಲು…!

ಫೇಕ್ ನ್ಯೂಸ್ ಎಂದು ಖಚಿತವಾದ ನಂತರ ಅದನ್ನು ಆನ್ಲೈನ್ ನಿಂದ ಡಿಲೀಟ್ ಮಾಡದೇ ಇದ್ದರೆ ಒಂದು ವರ್ಷ ಜೈಲು ಖಚಿತ. ಆದರೆ, ಇದು ಭಾರತದಲ್ಲಲ್ಲ!

ಫೇಕ್ ನ್ಯೂಸ್ ಗೆ ಕಡಿವಾಣ ಹಾಕುವ ಉದ್ದೇಶದಿಂದ ರಷ್ಯಾ ಸಂಸತ್ ಒಂದು ಮಸೂದೆ ಅಂಗೀಕರಿಸಿದ್ದು, ಅದರ ಪ್ರಕಾರ, ಇನ್ನು ಮುಂದೆ ನ್ಯಾಯಾಲಯ ಯಾವುದನ್ನು ಸುಳ್ಳು ಸುದ್ದಿ ಎಂದು ತೀರ್ಮಾನ ಮಾಡುತ್ತದೆಯೋ ಅಂತ ಸುದ್ದಿಯನ್ನು ಆನ್ಲೈನ್ ನಿಂದ ಡಿಲೀಟ್ ಮಾಡದೇ ಹೋದಲ್ಲಿ ಸುದ್ದಿ ಪ್ರಕಟಿಸಿದಾತನಿಗೆ ಒಂದು ವರ್ಷ ಜೈಲು ಶಿಕ್ಷೆಗೊಳಪಡಿಸಲು ಅವಕಾಶವಿದೆ.

ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಈ ಕಾನೂನು ಅನ್ವಯವಾಗುವುದು. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ 50 ಸಾವಿರ ರೂಬೆಲ್ ದಂಡವನ್ನೂ ಕಟ್ಟಬೇಕಾಗುತ್ತದೆ.

ಆ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧೀ ಮನೋಭಾವದ ಕಂಟೆಂಟ್ ಗಳು ಆನ್ಲೈನ್ ನಲ್ಲಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿ ಟೀಕೆಗೂ ಒಳಗಾಗಿತ್ತು. ಈಗಲೂ ಸಹ ಕಾನೂನು ತಂದಿರುವುದಕ್ಕೆ ಆಕ್ಷೇಪ ಕೇಳಿಬಂದಿದ್ದು, ಈ ಹೊಸ ಕಾನೂನು ಅಳವಡಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಾದಂತಾಗುತ್ತದೆ ಎಂದು ಅಲ್ಲಿನ ಮಾನವ ಹಕ್ಕುಗಳ ಗುಂಪು ದನಿ ಎತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...