alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಮ್ ಆಡುತ್ತಲೇ ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿದ್ಲು ಯುವತಿ

ರಷ್ಯಾದಲ್ಲಿ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಗೇಮ್ ಆಡುತ್ತ ತನ್ನ ಪ್ರಿಯಕರನನ್ನೇ ಹತ್ಯೆ ಮಾಡಿಬಿಟ್ಟಿದ್ದಾಳೆ. ಅನಸ್ತಾಸಿಯಾ ಒನ್ಜಿಯಾ ಎಂಬ ಯುವತಿ ತನ್ನ ಪ್ರಿಯಕರ 24 ವರ್ಷದ ಡಿಮಿಟ್ರಿ ಸಿಂಕೆವಿಚ್ ಎಂಬಾತನ ಶಿರಚ್ಛೇದ ಮಾಡಿದ್ದಾಳೆ.

ನಂತರ ಅವನ ಗುಪ್ತಾಂಗಗಳನ್ನು ಕತ್ತರಿಸಿ ಹಾಕಿದ್ದಾಳೆ. ಅದಾದ್ಮೇಲೆ ಇತರ ಅಂಗಗಳನ್ನೂ ಕತ್ತರಿಸಿ ವಿಕೃತಿ ಮೆರೆದಿದ್ದಾಳೆ. ಅಷ್ಟಕ್ಕೇ ಅವಳ ಪೈಶಾಚಿಕ ಕೃತ್ಯ ಮುಗಿದಿಲ್ಲ. ಕತ್ತರಿಸಿದ ದೇಹದ ಭಾಗಗಳಲ್ಲಿ ಕೆಲವನ್ನು ಡಸ್ಟ್ ಬಿನ್ ಗೆ ಹಾಕಿದ್ದಾಳೆ.

ಇನ್ನೊಂದಷ್ಟನ್ನು ಫ್ರೀಜರ್ ನಲ್ಲಿಟ್ಟಿದ್ದಾಳೆ. ಉಳಿದವುಗಳನ್ನು ಮನೆಯ ಮುಂದೆ ನೇತುಹಾಕಿದ್ದಾಳೆ. ನೇತಾಡುತ್ತಿದ್ದ ಮಾಂಸದ ತುಂಡುಗಳನ್ನು ನೋಡಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದಕ್ಕೂ ಮುನ್ನ ಅನಸ್ತಾಸಿಯಾಗೆ ಸಹೋದರಿ ಕರೆ ಮಾಡಿದ್ದಳು.

ಏನು ಮಾಡ್ತಿದ್ದೀಯಾ ಅಂತ ಕೇಳಿದಾಗ ಪ್ರಿಯತಮನನ್ನು ಕತ್ತರಿಸಿ ಹಾಕ್ತಿರೋದಾಗಿ ಅನಸ್ತಾಸಿಯಾ ಅಕ್ಕನ ಬಳಿ ಹೇಳಿದ್ಲು. ಅವರ ತಂದೆ ಪೊಲೀಸ್ ಅಧಿಕಾರಿ. ಹಾಗಾಗಿ ಕೂಡಲೇ ತಂದೆಗೆ ಸಹೋದರಿ ವಿಷಯ ಮುಟ್ಟಿಸಿದ್ದಳು. ಈ ಹಿಂದೆ ಅನಸ್ತಾಸಿಯಾಳ ಪತಿ ಕೂಡ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...