alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಹುಡುಗಿಗಾಗಿ ಪ್ರತಿ ನಿತ್ಯ ಅಲ್ಲಿ ನಿಲ್ಲುತ್ತೆ ರೈಲು

ಜಪಾನ್ ನಲ್ಲಿ ಶಾಲೆಗೆ ತೆರಳುವ ಒಬ್ಬ ಹುಡುಗಿಯ ಸಲುವಾಗಿ ರೈಲು ಆಕೆಯ ಊರಿನ ನಿಲ್ದಾಣದಲ್ಲಿ ಪ್ರತಿ ನಿತ್ಯ ನಿಲ್ಲುತ್ತಿರುವ ಸುದ್ದಿ ಎರಡು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ ರಷ್ಯಾದ ಅಂತಹುದೇ ಪ್ರಕರಣವೊಂದರ ವರದಿ ಇಲ್ಲಿದೆ.

ಕರೀನಾ ಕೋಜ್ಲಾವಾ ಎಂಬ 14 ವರ್ಷದ ಬಾಲಕಿ ಸೇಂಟ್ ಪೀಟರ್ಸ್ಬರ್ಗ್-ಮುರ್ಮಾನಸ್ಕಾ ರೈಲಿನಲ್ಲಿ ಪ್ರತಿ ನಿತ್ಯ ಶಾಲೆಗೆ ತೆರಳುತ್ತಿದ್ದಳು. ಆಕೆಗೆ ಅಜ್ಜಿ ನಟಲಿಯಾ ಕೋಜ್ಲಾವಾ ಕೂಡಾ ಸಾಥ್ ನೀಡುತ್ತಿದ್ದು, ಇವರಿಬ್ಬರನ್ನು ಬಿಟ್ಟರೆ ಈ ಊರಿನಿಂದ ಪ್ರತಿ ನಿತ್ಯ ರೈಲಿನಲ್ಲಿ ಪ್ರಯಾಣಿಸುವವರು ಯಾರೂ ಇರಲಿಲ್ಲ.

ತಮ್ಮ ಸಿಬ್ಬಂದಿ ಸಲುವಾಗಿ ಈ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿತ್ತಾದರೂ ಅಲ್ಲಿಯವರೆಗೂ ಅಜ್ಜಿ-ಮೊಮ್ಮಗಳು ಕಾಯಬೇಕಾಗಿತ್ತು. ಹೀಗಾಗಿ ಕರೀನಾ ಕೋಜ್ಲಾವಾ ಹಾಗೂ ಆಕೆಯ ಅಜ್ಜಿ ಬೆಳಿಗ್ಗೆ 7-30 ರ ಸುಮಾರಿಗೆ ಮನೆ ಬಿಟ್ಟರೆ ಮನೆಗೆ ಬರುತ್ತಿದ್ದುದು ರಾತ್ರಿ 9 ರ ಸುಮಾರಿಗೆ. ಶಾಲೆ ಬೇಗ ಮುಗಿದರೂ ಇವರಿಬ್ಬರು ಸಿಬ್ಬಂದಿಗಳ ಸಲುವಾಗಿ ಹೊರಡುತ್ತಿದ್ದ ರೈಲಿಗಾಗಿ ಕಾಯಬೇಕಿತ್ತು.

ತಮಗಾಗುತ್ತಿದ್ದ ಬವಣೆಯನ್ನು ವಿವರಿಸಿ ಕರೀನಾ ಕೋಜ್ಲಾವಾಳ ಅಜ್ಜಿ ಹಿರಿಯ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅದಕ್ಕೀಗ ಸ್ಪಂದನೆ ಸಿಕ್ಕಿದೆ. ಇವರಿಬ್ಬರ ಸಲುವಾಗಿಯೇ ಮುಂಚೆ ಹೊರಡುತ್ತಿದ್ದ ರೈಲಿಗೆ ನಿಲುಗಡೆ ಮಾಡಲು ಸಮ್ಮತಿಸಲಾಗಿದೆ. ಇದರಿಂದಾಗಿ ಅಜ್ಜಿ-ಮೊಮ್ಮಗಳಿಬ್ಬರು ಮುಂಚಿತವಾಗಿಯೇ ಮನೆ ಸೇರುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...