alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸದಲ್ಲೇ ವಿಮಾನದ ಬಾಗಿಲು ತೆರೆಯಲೋದ ಭೂಪ

russian-tourist-tries-to-open-plane-door-mid-air-on-moscow-to-delhi-flightಮಿತಿ ಮೀರಿ ಮದ್ಯಪಾನ ಮಾಡಿದ್ದ ಪ್ರಯಾಣಿಕನೊಬ್ಬ ಆಗಸದಲ್ಲಿದ್ದಾಗಲೇ ವಿಮಾನದ ಬಾಗಿಲು ತೆರೆಯಲು ಮುಂದಾದ ಘಟನೆ ಮಾಸ್ಕೋ-ನವದೆಹಲಿ ನಡುವಣದ ವಿಮಾನದಲ್ಲಿ ನಡೆದಿದೆ. ಪ್ರಯಾಣಿಕನ ಈ ಪ್ರಯತ್ನ ಕಂಡು ವಿಮಾನ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಕಂಗಾಲಾಗಿದ್ದು, ಕಡೆಗೂ ಆತನನ್ನು ಹಿಡಿದು ನಿಲ್ಲಿಸಿ ಬಳಿಕ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಮೇ 22 ರಂದು ಈ ಘಟನೆ ನಡೆದಿದ್ದು, SU 232 ವಿಮಾನದಲ್ಲಿ ಮಾಸ್ಕೋದಿಂದ ನವದೆಹಲಿಗೆ ಬರುತ್ತಿದ್ದ ರಷ್ಯಾ ಪ್ರಯಾಣಿಕ ಇಂತಹ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾನೆ. ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಹಾಗೂ ಕೆಲ ಪ್ರಯಾಣಿಕರು ಆತನನ್ನು ಹಿಡಿದು ಕೂರಿಸಿದ್ದಾರೆ. ವಿಮಾನದ ಪೈಲೆಟ್ ದೆಹಲಿ ವಿಮಾನ ನಿಲ್ದಾಣದ ಭದ್ರತಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ವಿಮಾನ ಬಂದಿಳಿಯುತ್ತಿದ್ದಂತೆಯೇ ಹುಚ್ಚಾಟ ನಡೆಸಿದ್ದ ರಷ್ಯಾ ಪ್ರವಾಸಿಗನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಸಫ್ದರ್ ಜಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಈ ವೇಳೆ ಆತ ಮಿತಿಮೀರಿ ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ 50 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...