alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ನಲ್ಲೇ ಟಿವಿ ವರದಿಗಾರನಿಗೆ ಪಂಚ್

reporter-punched-twitter-650_650x400_51501760042

ಮಾಸ್ಕೋದಲ್ಲಿ ವ್ಯಕ್ತಿಯೊಬ್ಬ ನೇರಪ್ರಸಾರದಲ್ಲಿ ವರದಿ ನೀಡ್ತಾ ಇದ್ದ ರಿಪೋರ್ಟರ್ ಗೆ ಗುದ್ದಿದ್ದಾನೆ. ರಷ್ಯಾದ ಏರ್ ಬೋರ್ನ್ ಟ್ರೂಪ್ಸ್ ಡೇ ಆಚರಣೆ ಬಗ್ಗೆ ವರದಿಗಾರ ಮಾಹಿತಿ ನೀಡುತ್ತಿದ್ದ. ಮಧ್ಯೆ ಬಾಯಿಹಾಕಿದ ವ್ಯಕ್ತಿಯೊಬ್ಬ, ರಿಪೋರ್ಟರ್ ಗೆ ಅಡ್ಡಿಪಡಿಸಿದ್ದಾನೆ.

ಸುಮ್ಮನಿರುವಂತೆ ಸೂಚಿಸಿದ್ದಕ್ಕೆ ವರದಿಗಾರನ ಮುಖಕ್ಕೆ ಗುದ್ದಿದ್ದಾನೆ. ಈ ಘಟನೆಯಿಂದ ವರದಿಗಾರ ನಿಕಿತಾ ರಜ್ವೋಜೇವ್ ಗಾಬರಿಯಾಗಿದ್ದ, ಕೂಡಲೇ ಎನ್ ಟಿವಿ ಕೂಡ ನೇರಪ್ರಸಾರವನ್ನು ಮೊಟಕುಗೊಳಿಸಿತ್ತು. ವರದಿಗಾರನ ಮೇಲೆ ದಾಳಿ ಮಾಡಿದ ವ್ಯಕ್ತಿ ಮದ್ಯಪಾನ ಮಾಡಿದ್ದ.

ಘಟನೆ ನಡೆದು ಕೆಲಹೊತ್ತಿನಲ್ಲೇ ರಷ್ಯಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅವನೊಬ್ಬ ಗೂಂಡಾ ಅಂತಾ ಪೊಲೀಸರು ತಿಳಿಸಿದ್ದಾರೆ. ರಷ್ಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಈ ರೀತಿ ಘಟನೆ ನಡೆದಿರೋದು ಜನರನ್ನು ಕೆರಳಿಸಿದೆ. ಪತ್ರಕರ್ತನ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...