alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! 7 ವರ್ಷ ಉದ್ಯಮಿಗೆ ಸೆಕ್ಸ್ ಗುಲಾಮಳಾಗಿದ್ದಳು ಮಾಡೆಲ್

ರಷ್ಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾಡೆಲ್ ಒಬ್ಬಳ ಮೇಲೆ ಲೈಂಗಿಕ ಕಿರುಕುಳ ನಡೆದ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬ ಮಾಡೆಲನ್ನು ಸೆಕ್ಸ್ ಗುಲಾಮಳಾಗಿ ಮಾಡಿಕೊಂಡಿದ್ದ. ಮಾಡೆಲ್ ಳನ್ನು ಒತ್ತೆಯಾಳಾಗಿಟ್ಟುಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡ್ತಿದ್ದ. ಉದ್ಯಮಿಯಿಂದ ಹೇಗೋ ತಪ್ಪಿಸಿಕೊಂಡು ಬಂದ ಮಾಡೆಲ್ ಪೊಲೀಸರಿಗೆ ದೂರು ನೀಡಿದ್ದಾಳೆ.

25 ವರ್ಷದ ಮಾಡೆಲ್ ನತಾಶಾ ಉದ್ಯಮಿ ಕಾಮತೃಷೆಗೆ ಬಲಿಯಾಗಿದ್ದಾಳೆ. ಎರಡು ಮಕ್ಕಳ ಜೊತೆ ನತಾಶಾಳನ್ನು ಉದ್ಯಮಿ ಬಂಧಿಸಿಟ್ಟಿದ್ದ ಎನ್ನಲಾಗಿದೆ. ನತಾಶಾ ಎದೆ, ಕಾಲು, ಪಕ್ಕೆಲಬುಗಳ ಮೇಲೆ ಗಾಯದ ಗುರುತಿದೆ. ಮಾಡೆಲ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ನತಾಶಾ ಈಗ ಉದ್ಯಮಿ ಕೈಗೆ ಸಿಕ್ಕಿ ಜೀವಂತ ಹೆಣವಾಗಿದ್ದಾಳೆ.

ನತಾಶಾ 18 ವರ್ಷದಲ್ಲಿರುವಾಗಲೇ ಉದ್ಯಮಿ ಆಕೆಯನ್ನು ಬಂಧಿ ಮಾಡಿದ್ದನಂತೆ. ಸದಾ ನತಾಶಾ ಮೇಲೆ ಕಣ್ಣಿಟ್ಟಿದ್ದ ಉದ್ಯಮಿ ನತಾಶಾ ಬೇರೆಯವರ ಜೊತೆ ಮಾತನಾಡದಂತೆ ನಿರ್ಬಂಧ ಹೇರಿದ್ದನಂತೆ. ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಕಿರುಕುಳ ನೀಡುತ್ತಿದ್ದ ಎಂದು ನತಾಶಾ ದೂರಿದ್ದಾಳೆ. ಪೊಲೀಸರು ಉದ್ಯಮಿ ಬಂಧನಕ್ಕೆ ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...